Mysore
22
overcast clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ರಾಯಚೂರು: ಮೂಲಸೌಕರ್ಯ ಕಲ್ಪಿಸುವಂತೆ ಚುನಾವಣಾ ಬಹಿಷ್ಕಾರ ಮಾಡಿದ ದಲಿತ ಕಾಲೋನಿ

ರಾಯಚೂರು: ದೇಶಾದ್ಯಂತ ಮೂರನೇ ಹಂತದ ಚುನಾವಣೆ ನಡೆಯುತಿದ್ದು, ರಾಜ್ಯದಲ್ಲಿ ಎರಡನೇ ಹಂತದ ಚುನಾವಣೆ ನಡೆಯುತ್ತಿದೆ. ಇದರಲ್ಲಿ ಇಂದು ರಾಯಚೂರು ಜಿಲ್ಲೆಯ ಲಿಂಗಸೂರು ತಾಲೂಕಿನ ಅಕನಾಳ-ಉಪನಾಳ ಗ್ರಾಮದ ದಲಿತ ಕಾಲೋನಿ ಜನರು ಚುನಾವನಾ ಬಹಷ್ಕಾರ ಮಾಡಿದ್ದಾರೆ.

ಇಲ್ಲಿನ ದಲಿತ ಕಾಲೋನಿಯವರು ಪರಿಶಿಷ್ಟ ಜಾತಿಯ ಸಮುದಾಯದವರು ಚುನಾವಣಾ ಬಹಿಷ್ಕಾರ ಮಾಡಿದ್ದಾರೆ. ಗ್ರಾಮಕ್ಕೆ ಸುಗಮ ರಸ್ತೆ ಸಂಚಾರವಿಲ್ಲ. ನೀರಿನ ಸಮರ್ಪಕ ಸೌಲಭ್ಯವಿಲ್ಲ. ಶೌಚಾಲಯ, ಚರಂಡಿ ಹಾಗೂ ವಿದ್ಯುತ್‌ ಸೇರಿದಂತೆ ಪ್ರಮುಖ ಮೂಲಕಭೂತ ಸೌಕರ್ಯಗಳೇ ಗ್ರಾಮಕ್ಕಿಲ್ಲ ಎಂದು ಚುನಾವಣಾ ಬಹಿಷ್ಕರಿಸಿದರು.

ನಮ್ಮ ಕಾಲೋನಿಗೆ ಮೂಲ ಸೌಕರ್ಯ ಒದಗಿಸದ ಹೊರತು ನಾವು ಮತದಾನದಲ್ಲಿ ಪಾಲ್ಗೊಳ್ಳುವುದಿಲ್ಲ. ಮತದಾನವನ್ನೂ ಮಾಡುವುದಿಲ್ಲ ಎಂದು ಅವರು ಧರಣಿ ಮಾಡಿದರು.

Tags: