Mysore
27
scattered clouds

Social Media

ಭಾನುವಾರ, 07 ಡಿಸೆಂಬರ್ 2025
Light
Dark

ಹಸುಗಳ ಕೆಚ್ಚಲು ಕೊಯ್ದ ಪ್ರಕರಣ: ಸಚಿವ ಜಮೀರ್‌ ಅಹಮ್ಮದ್‌ ವಿರುದ್ಧ ಪ್ರಮೋದ್‌ ಮುತಾಲಿಕ್‌ ಆಕ್ರೋಶ

ಧಾರವಾಡ: ಹಸುಗಳ ಕೆಚ್ಚಲು ಕೊಯ್ದ ನೀಚರನ್ನು ಬಂಧಿಸದಿದ್ದರೆ ಸಚಿವ ಜಮೀರ್‌ ಅಹಮ್ಮದ್‌ ಖಾನ್‌ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌ ಎಚ್ಚರಿಕೆ ನೀಡಿದ್ದಾರೆ.

ಈ ಬಗ್ಗೆ ಧಾರವಾಡದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಾಮರಾಜಪೇಟೆಯಲ್ಲಿ ಹಸುಗಳ ಕೆಚ್ಚಲು ಕೊಯ್ದ ಘಟನೆ ನೀಚ ಕೃತ್ಯ. ರಾಜ್ಯದಲ್ಲಿ ಇಸ್ಲಾಮಿಕ್‌ ಶಕ್ತಿಯ ಪ್ರದರ್ಶನ ಆಗುತ್ತಿದೆ. ಇದು ರಾಕ್ಷಸ ಕೃತ್ಯಕ್ಕೆ ಉದಾಹರಣೆ ಎಂದು ಕಿಡಿಕಾರಿದರು.

ಇನ್ನು ಮುಂದುವರಿದು ಮಾತನಾಡಿದ ಅವರು, ಜಮೀರ್‌ ಅಹಮ್ಮದ್‌ ಖಾನ್‌ ಅವರೇ, ಇದು ನಿಮ್ಮ ಕ್ಷೇತ್ರದಲ್ಲಿ ಆಗಿದೆ. ಇದನ್ನು ತಾವು ಗಂಭೀರವಾಗಿ ತೆಗೆದುಕೊಳ್ಳಬೇಕು. ಹಸು ಹಿಂದೂಗಳಿಗೆ ಅತ್ಯಂತ ಪೂಜ್ಯ ಪ್ರಾಣಿ. ಅದು ಬರೀ ಪ್ರಾಣಿ ಅಲ್ಲ, ಅದು ನಮಗೆ ಅನ್ನ ನೀಡುತ್ತದೆ. ಗೊಬ್ಬರ ಕೊಡುತ್ತದೆ. ಔಷಧಿ ಕೊಡುತ್ತದೆ. ಇದೆಲ್ಲದರ ಜೊತೆಗೆ ಅದು ರೈತರ ಬೆನ್ನೆಲುಬು ಸಹ ಹೌದು. ಅದರ ಕೆಚ್ಚಲು ಕೊಯ್ದ ನೀಚರನ್ನು ಒದ್ದು ಒಳಗಡೆ ಹಾಕದಿದ್ದರೆ ಶ್ರೀರಾಮ ಸೇನೆಯಿಂದ ಜಮೀರ್‌ ವಿರುದ್ಧ ರಾಜ್ಯದಲ್ಲಿ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಹಸುವಿನ ಕೆಚ್ಚಲು ಕೊಯ್ದಿರುವುದನ್ನು ನೋಡಿದರೆ ಸುಮ್ಮನೆ ಇರಲು ಆಗಲ್ಲ. ಇದನ್ನು ಖಂಡಿಸುತ್ತೇನೆ. ನಿಮ್ಮ ಒಳಗೆ ಇರುವ ಬಾಂಗ್ಲಾದೇಶದವರ ಕುಕೃತ್ಯಕ್ಕೆ ಉತ್ತರವನ್ನು ನೀವೇ ಕೊಡಬೇಕು. ನೀವೇ ಕಿಡಿಗೇಡಿಗಳನ್ನು ಒದ್ದು ಒಳಗೆ ಹಾಕಬೇಕು ಎಂದು ಆಗ್ರಹಿಸಿದರು.

Tags:
error: Content is protected !!