ಬೆಂಗಳೂರು : ಕೃಷಿ ಸಚಿವನಾಗಿ ಅಧಿಕಾರ ವಹಿಸಿಕೊಂಡ ನಂತರ ನಿರಂತರವಾಗಿ ಅಧಿಕಾರಿಗಳ ಸಭೆ ಮಾಡುವುದರೊಂದಿಗೆ ರೈತರೊಂದಿಗೆ ಹಾಗೂ ಜನಪ್ರತಿನಿಧಿಗಳೊಂದಿಗೆ ವಿಮೆ ಪರಿಹಾರ ಸುಧಾರಣೆ ತರಲು ಚರ್ಚಿಸಿ ಆಯಾ ಹಂಗಾಮಿನ ವಿಮೆ ಪರಿಹಾರವನ್ನು ಅದೇ ವಾರ್ಷಿಕ ವರ್ಷದ ಅವಧಿಯಲ್ಲಿ ಒದಗಿಸುವಂತೆ ಕ್ರಮ ಜರುಗಿಸಲಾಗಿದೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿಯವರು ವಿಧಾನಸಭೆಯಲ್ಲಿ ಉತ್ತರ ನೀಡಿದರು.
ಕಲ್ಬುರ್ಗಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್ ಕೇಳಿದ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಕೃಷಿ ಸಚಿವರು, ಕಳೆದ ಮೂರು ವರ್ಷಗಳಲ್ಲಿ ಬಿತ್ತನೆ ಮಾಡಿದ ಕೆಲವೇ ದಿನಗಳಲ್ಲಿ ಅಧಿಕ ಮಳೆಯಿಂದ ಶೇ 5೦ಕ್ಕೂ ಹೆಚ್ಚು ಬೆಳೆ ಹಾನಿ ಆದ ಸಂದರ್ಭದಲ್ಲಿ ತಕ್ಷಣವೇ ರೈತರಿಗೆ ಮಿಡ್ ಸೀಸನ್ ಅಡ್ವೈಸರಿ ನಿಯಾಮಾವಳಿ ಪ್ರಕಾರ ವಿಮೆ ಪರಿಹಾರವನ್ನು ನೀಡಿ ರೈತರ ನೇರವಿಗೆ ನಮ್ಮ ಸರ್ಕಾರ ಧಾವಿಸಿದೇ ಎಂದು ಸಚಿವರು ಉತ್ತರಿಸಿದರು.
ವಿಶೇಷವಾಗಿ ಕಪ್ & ಕ್ಯಾಪ್ ಮಾದರಿಯಲ್ಲಿ ವಿಮೆ ಪರಿಹಾರವನ್ನು ನಿರ್ಧರಿಸಲು ಕ್ರಮ ಕೈಕೊಂಡಿರುವುದರಿಂದ ವಿಮೆ ಪರಿಹಾರ ವಿತರಣೆಯಲ್ಲಿ ಸುಧಾರಣೆಯನ್ನು ತರಲಾಗಿದೆ.
ಈ ಕುರಿತು ವಿಮಾ ಕಂಪನಿ ಅಧಿಕಾರಿಗಳೊಂದಿಗೆ ಹಲವು ಬಾರಿ ಸಭೆ ನಡೆಸಿರುವುದಲ್ಲದೇ, ಕ್ರಾಪ್ ಕಟಿಂಗ್ ಎಕ್ಸಪರಿಮೇಟ್ ಸರಿಯಾಗಿ ಹಾಗೂ ವೈಜ್ಞಾನಿಕವಾಗಿ ನಡೆಸಬೇಕೆಂದು ಸೂಚನೆ ನೀಡಲಾಗಿದ್ದರ ಪರಿಣಾಮ ರಾಜ್ಯದಲ್ಲಿ ಬೆಳೆ ವಿಮೆ ಯೋಜನೆಯನ್ನು ಅತ್ಯಂತ ಯಶ್ವಸಿಯಾಗಿ ಜಾರಿಗೊಳಿಸಲಾಗಿದೆ ಎಂದು ತಿಳಿಸಿದರು.
ಈ ಮೂರು ವರ್ಷಗಳಲ್ಲಿ ಎಲ್ಲಾ ಹಂಗಾಮುಗಳಲ್ಲಿ ರಾಜ್ಯದಲ್ಲಿ ಒಟ್ಟು 73 ಲಕ್ಷ ರೈತರು ವಿಮೆ ಹಣ ಪಾವತಿಸಿ ನೊಂದಾಯಿಸಿಕೊಂಡವರ ಪೈಕಿ ಶೇ ಅಂದಾಜು 60% ರಷ್ಟು ರೈತರು, 43 ಲಕ್ಷ ನೊಂದಾಯಿಸಿಕೊಂಡ ರೈತರಿಗೆ ಒಟ್ಟು 5542.17 ಕೋಟಿ ರೂಪಾಯಿಗಳ ವಿಮೆ ಪರಹಾರವನ್ನು ನೀಡಿ ರೈತರ ಸಂಕಷ್ಟದ ಸಮಯದಲ್ಲಿ ನಮ್ಮ ಸರ್ಕಾರ ರೈತರಿಗೆ ವಿಮೆ ನೀಡಿ ರೈತರ ಸಂಕಷ್ಟಕ್ಕೆ ನೆರವಾಗಿದೆ ಎಂದು ಚಲುವರಾಯಸ್ವಾಮಿಯವರು ತಿಳಿಸಿದರು.
ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ರಾಜ್ಯದಲ್ಲಿ ಒಟ್ಟು 21 ಲಕ್ಷ ರೈತರು ನೋಂದಣಿಯಾಗಿದ್ದು, ಬಿತ್ತನೆ ವೈಫಲ್ಯ, ಪ್ರಕೃತಿ ವಿಕೋಪ, ಮಧ್ಯಂತರ ಬೆಳೆ ವಿಮೆ ಪರಿಹಾರ, ಕೋಯ್ಲೋತ್ತರ ಬೆಳೆ ನಷ್ಟದಡಿ 7.06 ಲಕ್ಷ ರೈತರಿಗೆ ಒಟ್ಟು ರೂ. 571.49 ಕೋಟಿ ಪರಿಹಾರ ಮಂಜೂರಾಗಿದ್ದು, ಇಲ್ಲಿಯವರೆಗೆ 3.41 ಲಕ್ಷ ರೈತರಿಗೆ ರೂ.218.80 ಕೋಟಿ ಇತ್ಯರ್ಥಪಡಿಸಲಾಗಿದೆ ಎಂದು ಸಚಿವರು ಉತ್ತರಿಸಿದರು.
ಕಲಬುರಗಿ ಜಿಲ್ಲೆಯಲ್ಲಿ ಪ್ರಕೃತಿ ವಿಕೋಪದಡಿ ಒಟ್ಟು 20563 ಪ್ರಕರಣಗಳಿಗೆ ಒಟ್ಟು ರೂ. 8.21 ಕೋಟಿ ಬೆಳೆ ವಿಮೆ ಪರಿಹಾರ ಇತ್ಯರ್ಥಪಡಿಸಲಾಗಿದೆ. ಮಧ್ಯಂತರ ಬೆಳೆ ವಿಮೆ ಪರಿಹಾರದಡಿ ( mid season Adversity) ಒಟ್ಟು 2.67 ಲಕ್ಷ ರೈತರಿಗೆ 234.74 ಕೋಟಿ ವಿಮೆ ಪರಿಹಾರ ನೀಡಲಾಗಿದೆ ಎಂದು ಕೃಷಿ ಸಚಿವರು ಹೇಳಿದರು.



