Mysore
18
scattered clouds

Social Media

ಭಾನುವಾರ, 25 ಜನವರಿ 2026
Light
Dark

ಸಂಸತ್‌ ಅಧಿವೇಶನ: ಬಿಜೆಪಿ ಆರೋಪಕ್ಕೆ ಕೋವಿಡ್‌ ಹಗರಣದ ಕೌಂಟರ್‌ ಕೊಡಲು ಕಾಂಗ್ರೆಸ್‌ ತಯಾರಿ

ಬೆಂಗಳೂರು: ಮುಡಾ ಹಾಗೂ ವಾಲ್ಮೀಕಿ ಹಗರಣವನ್ನು ಪ್ರಸ್ತಾಪಿಸಿ ರಾಷ್ಟ್ರೀಯ ಮಟ್ಟದಲ್ಲಿ ರಾಜ್ಯ ಕಾಂಗ್ರೆಸ್‌ ಸರ್ಕಾರದ ವಿರುದ್ಧ ತೀವ್ರ ಮುಜುಗರ ಉಂಟು ಮಾಡಿದ್ದ ಬಿಜೆಪಿಗೆ ಕೌಂಟರ್‌ ಕೊಡಲು ಕಾಂಗ್ರೆಸ್‌ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಅದೇ ರೀತಿಯ ಅಸ್ತ್ರ ಪ್ರಯೋಗಿಸಲು ಕೈ ನಾಯಕರು ಸಿದ್ಧತೆ ನಡೆಸಿದ್ದು, ಕೋವಿಡ್‌ ಹಗರಣದ ವರದಿಯನ್ನು ಮುಂಬುವರು ಸಂಸತ್‌ ಅಧಿವೇಶ ಸಂಸತ್ತಿನಲ್ಲಿ ಪ್ರಸ್ತಾಪಿಸಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ.

ನ್ಯಾ. ಮೈಕೆಲ್ ಡಿ ಕುನ್ಹಾ ಅವರ ವರದಿ ಆಧರಿಸಿ ಬಿಜಿಪಿ ಸಂಸದ ಬಸವರಾಜ ಬೊಮ್ಮಾಯಿ ಹಾಗೂ ಡಿ ಸುಧಾಕರ್‌ ಅವರನ್ನು ಟಾರ್ಗೆಟ್‌ ಮಾಡುವ ನೆಪದಲ್ಲಿ ಪ್ರಧಾನಿ ಮೋದಿಗೆ ಸವಾಲು ಹಾಕುವುದು ಕಾಂಗ್ರೆಸ್‌ನ ಮಂತ್ರವಾಗಿದೆ. ಜೊತೆಗೆ ಈಗಾಗಲೇ ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಶ್ರೀರಾಮುಲು ವಿರುದ್ಧದ ಕೋವಿಡ್‌ ಹಗರಣದ ತನಿಖೆಗೆ ಎಸ್‌ಐಟಿ ರಚನೆ ಮಾಡಲಾಗಿದೆ. ಮುಂದುವರಿದು ಹಗರಣಕ್ಕೆ ಸಂಬಂಧಿಸಿದಂತೆ ಸಚಿವ ಪ್ರಿಯಾಂಕ್‌ ಖರ್ಗೆ 7000 ಸಾವಿರ ಕೋಟಿಗೂ ಹೆಚ್ಚು ಹಗರಣ ನಡೆದಿದೆ ಎಂದು ಆರೋಪಿಸಿದ್ದು. ಇದನ್ನೆಲ್ಲಾ ಮುಂದಿಟ್ಟುಕೊಂಡು ಕಾಂಗ್ರೆಸ್‌ನ ನಾಯಕರು ರಾಷ್ಟ್ರ ಮಟ್ಟದಲ್ಲಿ ಬಿಜೆಪಿಗೆ ಕೌಂಟರ್‌ ಕೊಟಲು ಸಜ್ಜಾಗಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರು ನ್ಯಾ. ಮೈಕೆಲ್ ಡಿ ಕುನ್ಹಾ ಅವರನ್ನು ಭೇಟಿಯಾಗಿ ಕೋವಿಡ್‌ ಹಗರಣದ ಪೂರ್ಣ ಪ್ರಮಾಣದ ವರದಿ ನೀಡುವಂತೆ ಮನವಿ ಮಾಡಿದ್ದಾರೆ. ಹೀಗೆ ಪೂರ್ಣ ಪ್ರಮಾಣದ ವರದಿ ಬರ್ತಿದಂತೆ ಇದು ಬಿಜೆಪಿಗೆ ಸವಾಲಾಗಿ ಪರಿಣಮಿಸಲಿದೆ.

ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿಯವರು ಮುಡಾ, ವಾಲ್ಮೀಕಿ ಹಗರಣಗಳ ಕುರಿತು ಕಾಂಗ್ರೆಸ್‌ ಪಕ್ಷವನ್ನು ಟೀಕಿಸುತ್ತಿದ್ದರು. ಈಗ ಕೋವಿಡ್‌ ಹಗರಣವನ್ನು ಮುಂದಿಟ್ಟು ದೆಹಲಿ ಮಟ್ಟದಲ್ಲಿ ಬಿಜೆಪಿ ರಾಷ್ಟ್ರೀಯ ನಾಯಕರಿಗೆ ಮಖಭಂಗ ಉಂಟುಮಾಡಲು ಸಿಎಂ ಸಿದ್ದರಾಮಯ್ಯ ಸಿದ್ಧತೆ ನಡೆಸಿದ್ದಾರೆ. ಮುಂಬರುವ ಲೋಕಸಭೆ ಅಧಿವೇಶನದಲ್ಲಿ ಕೈ ಸಂಸದರ ಮೂಲಕ ಹಗರಣವನ್ನು ಸಂಸತ್ತಿನಲ್ಲಿ ಚರ್ಚಿಸುವ ಕುರಿತು ಯೋಚನೆ ಮಾಡಲಾಗಿದೆ.

Tags:
error: Content is protected !!