Mysore
17
clear sky

Social Media

ಶನಿವಾರ, 27 ಡಿಸೆಂಬರ್ 2025
Light
Dark

ವಿವಾದಗಳಿಂದ ಸಿಎಂ ಸಿದ್ದರಾಮಯ್ಯನವರ ಶಕ್ತಿ ಕುಂದಿಲ್ಲ: ಕೆಎನ್‌ ರಾಜಣ್ಣ

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರಿಗೆ ಯಾವುದೇ ಅನಗತ್ಯ ವಿವಾದಗಳಿಂದ ಶಕ್ತಿ ಕುಂದಿಲ್ಲ. ಅವರನ್ನು ರಾಜ್ಯದ ಜನತೆ ಟಗರೆಂದು ಕರೆಯುತ್ತಾರೆ ಎಂದು ಹಾಸನದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್‌.ರಾಜಣ್ಣ ತಿಳಿಸಿದ್ದಾರೆ.

ನಗರದಲ್ಲಿ ಇಂದು(ನ.19) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಜನತೆ ಸಿಎಂ ಸಿದ್ದರಾಮಯ್ಯ ಅವರನ್ನು ಟಗರೆಂದು ಕರೆಯುತ್ತಾರೆ. ಅವರಿಗೆ ಯಾವುದೇ ಶಕ್ತಿ ಕುಂದಿಲ್ಲ, ಅವರಲ್ಲಿ ಇಂದಿಗೂ ಪೂರ್ಣ ಪ್ರಮಾಣದ ಶಕ್ತಿಯಿದೆ. ಒಂದು ವೇಳೆ ಸಿದ್ದರಾಮಯ್ಯ ಅವರ ಶಕ್ತಿ ಕುಂದಿದಾಗ ತುಂಬೋಣ ಎಂದರೆ ಅವರಿಗೆ ಶಕ್ತಿಯೇ ಖಾಲಿ ಆಗಿಲ್ಲವಲ್ಲ ಎಂದು ಹೇಳಿದ್ದಾರೆ.

ವಕ್ಫ್‌ ವಿಚಾರದಲ್ಲಿ ಬಿಜೆಪಿ ನಾಯಕರೇ ಇಲ್ಲ ಸಲ್ಲದ ಸುಳ್ಳುಗಳನ್ನು ಹೇಳಿದ್ದು, ಸರ್ಕಾರಕ್ಕೆ 316 ಸಂಖ್ಯೆಯಷ್ಟು ನೋಟಿಸ್‌ಗಳನ್ನು ನೀಡಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಿ ಜಿಲ್ಲಾ ಮಟ್ಟದಲ್ಲಿ ಸರಿಪಡಿಸುವಂತೆ ಸೂಚಿಸಲಾಗಿದೆ ಎಂದಿದ್ದಾರೆ.

ಇನ್ನು ಸಿಎಂ ಹಾಗೂ ಸಚಿವರ ಸಭೆಗಳ ಎಲ್ಲ ಸಭೆಗಳ ವಿಚಾರಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ. ಹೀಗಾಗಿ ಡಿಸೆಂಬರ್‌ 9 ರಿಂದ ಅಧಿವೇಶನಗಳನ್ನು ನಡೆಸಲಾಗುತ್ತದೆ. ಈ ಅಧಿವೇಶನದಲ್ಲಿ ಪ್ರತಿಯೊಬ್ಬ ಶಾಸಕರು ಭಾಗಿಯಾಗಬೇಕು. ಅಲ್ಲಿ ನಡೆಯುವ ಯಾವುದೇ ಚರ್ಚೆಗಳಿಗೂ ಸಮರ್ಪಕವಾಗಿ ಮಂತ್ರಿಗಳು ಉತ್ತರ ನೀಡಬೇಕೆಂದು ಸೂಚಿಸಲಾಗಿದೆ ತಿಳಿಸಿದ್ದಾರೆ.

Tags:
error: Content is protected !!