ಮೈಸೂರು: ಮೈಸೂರು ಕೊಡಗು ಕ್ಷೇತ್ರದ ಬಿಜೆಪಿ ಸಂಸದ ಪ್ರತಾಪ್ ಸಿಂಹ ಸಹೋದರ ವಿಕ್ರಂ ಸಿಂಹ ವಿರುದ್ಧದ ಅಕ್ರಮವಾಗಿ ಮರ ಕಡಿತ ಪ್ರಕರಣ ಸಂಬಂಧ ನಿರಂತರ ಟೀಕಾ ಪ್ರಹಾರ ಮಾಡುತ್ತಿರುವ ಕಾಂಗ್ರೆಸ್ ವಿರುದ್ಧ ಸಂಸದ ಪ್ರತಾಪ್ ಸಿಂಹ ಕಿಡಿಕಾರಿದ್ದಾರೆ.
ಮುಂದಿನ ಲೋಕಸಭಾ ಚುನಾವಣೆಯನ್ನು ನನ್ನನ್ನು ಸೋಲಿಸಲು ಸಾಧ್ಯವಿಲ್ಲ ಎಂದು ಮನಗಂಡಿರುವ ಕಾಂಗ್ರೆಸ್ ನನಗೆ ಟಿಕೆಟ್ ತಪ್ಪಿಸಲು ನಡೆಯುತ್ತಿರುವ ಪಿತೂರಿ ನಡೆಸುತ್ತಿದ್ದಾರೆ. ಇದೊಂದು ಸಂಪೂರ್ಣವಾಗಿ ದುರುದ್ದೇಶಪೂರಿತ ರಾಜಕಾರಣವಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಈ ವಿಷಯದಲ್ಲಿ ಇದೇ ನನ್ನ ಕೊನೆಯ ಪ್ರತಿಕ್ರಿಯೆ. ಡಾ. ಪರಮೇಶ್ವರ ಸಾಹೇಬರೇ, ರಾಜಕಾರಣ ಮಾಡುತ್ತಿರುವವರು ಯಾರು? A1, A2ಗೆ ಸ್ಟೇಷನ್ ನಲ್ಲೇ ಬೈಲ್ ಕೊಡುತ್ತೀರಿ, FIRನಲ್ಲಿ ಹೆಸರೇ ಇಲ್ಲದ ನನ್ನ ತಮ್ಮನಿಗೆ ಕೋರ್ಟ್ ಬೈಲ್! ನನ್ನನ್ನು ಚುನಾವಣೆಯಲ್ಲಿ ಸೋಲಿಸಲು ಸಾಧ್ಯವಿಲ್ಲ ಎಂದು ಟಿಕೆಟ್ ತಪ್ಪಿಸಲು ನಡೆಯುತ್ತಿರುವ ಪಿತೂರಿಯಿದು. ಸಚಿವ ಮಧು ಬಂಗಾರಪ್ಪ ಅವರ ಆರೂವರೆ ಕೋಟಿ ಚೆಕ್ ಬೌನ್ಸ್ ಪ್ರಕರಣ ಸಾಭೀತಾಗುತ್ತಿದ್ದಂತೆ ಈ ವಿಷಯದಿಂದ ಮಾಧ್ಯಮ ಮತ್ತು ಜನರನ್ನು ಬೇರೆಡೆಗೆ ಸೆಳೆಯಲು ನನ್ನ ತಮ್ಮನ ಪ್ರಕರಣವನ್ನು ಮುನ್ನಲೆಗೆ ತರುತ್ತಾರೆ ಎಂದು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ವಿಡಿಯೋವೊಂದನ್ನು ಸಂಸದ ಪ್ರತಾಪ್ ಸಿಂಹ ಹಂಚಿಕೊಂಡಿದ್ದಾರೆ.





