Mysore
32
scattered clouds

Social Media

ಸೋಮವಾರ, 16 ಮಾರ್ಚ್ 2026
Light
Dark

ಕೆಲವೇ ದಿನಗಳಲ್ಲಿ ಕಾಂಗ್ರೆಸ್ ಬಿದ್ದು ಹೋಗುತ್ತದೆ, ಕಾದು ನೋಡಿ : ಮಾಜಿ ಸಚಿವ ಮುರುಗೇಶ ನಿರಾಣಿ

ವಿಜಯಪುರ : ಕಾಂಗ್ರೆಸ್‌ನ 50ಕ್ಕೂ ಹೆಚ್ಚು ಶಾಸಕರು ಬಿಜೆಪಿ ಹೈಕಮಾಂಡ್ ಸಂಪರ್ಕದಲ್ಲಿದ್ದು, ಭೇಟಿಯಾಗಿ ಹೋಗಿದ್ದಾರೆ ಎಂದು ಮಾಜಿ ಸಚಿವ ಮುರುಗೇಶ ನಿರಾಣಿ ಹೇಳಿದ್ದಾರೆ.

ಕಾಂಗ್ರೆಸ್‌ ಪತನ ವಿಚಾರವಾಗಿ ಮಾತನಾಡಿದ ಅವರು, ಕೆಲವೇ ದಿನಗಳಲ್ಲಿ ಈ ಕಾಂಗ್ರೆಸ್ ಬಿದ್ದು ಹೋಗುತ್ತದೆ ಕಾದು ನೋಡಿ, ಕಾಂಗ್ರೆಸ್‌ನಲ್ಲಿ ತೋರಿಕೆಗಷ್ಟೇ ಎರಡು ಬಣಗಳಿವೆ. ಆದರೆ ಅಲ್ಲಿ ಒಳಗೆ ನಾಲ್ಕೈದು ಬಣಗಳಿವೆ ಎಂದಿದ್ದಾರೆ.

ಮುಖ್ಯಮಂತ್ರಿಯಾಗುವವರು, ಉಪ ಮುಖ್ಯಮಂತ್ರಿಯಾಗುವವರು, ಸಚಿವರಾಗುವವರು‌ ಹೀಗೆ ಅವರವ ರೇ ಕಚ್ಚಾಡಿ ಕಚ್ಚಾಡಿ, ಸರ್ಕಾರ ಪತನವಾಗುತ್ತದೆ. ಮೊದಲ ಬಾರಿಗೆ ಶಾಸಕರಾದವರ ಕ್ಷೇತ್ರಕ್ಕೆ 1 ರೂಪಾಯಿ ಅನುದಾನ ಸಿಗುತ್ತಿಲ್ಲ. ಕಾಂಗ್ರೆಸ್ ಬೆಳವಣಿಗೆಯಿಂದ ಹಲವರು ಬಿಜೆಪಿಯ ಹೈಕಮಾಂಡ್ ಸಂಪರ್ಕದಲ್ಲಿದ್ದಾರೆ ಎಂದು ತಿಳಿಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!