ಬೆಂಗಳೂರು: ಮಿಜೋರಾಂ ಹೊರತುಪಡಿಸಿ ಉಳಿದ ನಾಲ್ಕು ರಾಜ್ಯಗಳಲ್ಲಿ ಕಾಂಗ್ರೆಸ್ ಗೆ ಜಯ ಸಿಕ್ಕೇ ಸಿಗುತ್ತದೆ ಎಂದು ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇಂದು ಬೆಂಗಳೂರು ಸದಾಶಿವನಗರದ ತಮ್ಮ ನಿವಾಸದಲ್ಲಿ ಪಂಚ ರಾಜ್ಯಗಳ ಚುನಾವಣೆ ವಿಚಾರವಾಗಿ ಪ್ರತಿಕ್ರಿಯಿಸಿದ ಮಲ್ಲಿಕಾರ್ಜುನ್ ಖರ್ಗೆ, ಎಲ್ಲಾ ರಾಜ್ಯಗಳಲ್ಲೂ ಚುನಾವಣೆ ಚೆನ್ನಾಗಿ ಆಗಿದೆ.
ನಮಗೆ ಬಂದಿರುವ ಫೀಡ್ ಬ್ಯಾಕ್ ಚೆನ್ನಾಗಿದೆ. ನಾಲ್ಕು ರಾಜ್ಯಗಳಲ್ಲಿ ಕಾಂಗ್ರೆಸ್ ಗೆ ಜಯ ಸಿಗುತ್ತೆ. ಮಿಜೋರಾಂನಲ್ಲಿ ಅತಂತ್ರ ಆಗಬಹುದು ಎಂದು ಹೇಳಿದ್ದಾರೆ.
ನಾವು ಊಹಿಸಿದಂತೆ ಫಲಿತಾಂಶ ಬರಲಿದೆ. ನಮಗೆ ಬಹುಮತ ದೊರೆಯುತ್ತದೆ. ಆಯಾ ರಾಜ್ಯಗಳ ನಾಯಕರ ಜೊತೆ ಮಾತನಾಡಿದ್ದೇನೆ. ಕಮಲ್ ನಾಥ್ ಜೊತೆಗೂ ಸಂಪರ್ಕದಲ್ಲಿದ್ದೇನೆ. ವಿಪಕ್ಷ ನಾಯಕರ ಜೊತೆ ಮಾತನಾಡಿದ್ದೇನೆ. ಝೂಂ ಮೀಟಿಂಗ್ ಗಳನ್ನು ಮಾಡಿದ್ದೇವೆ. ಎಲ್ಲ ಕಡೆಯೂ ನಮಗೆ ಬಹುಮತ ಬರುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.