Mysore
28
overcast clouds

Social Media

ಭಾನುವಾರ, 22 ಮಾರ್ಚ್ 2026
Light
Dark

ಮೈಸೂರು ಮಹಾರಾಜರನ್ನು ಜನಪ್ರತಿನಿಧಿಯನ್ನಾಗಿ ಮಾಡಿದ್ದು ಕಾಂಗ್ರೆಸ್‌: ಶಿವಾನಂದ ಪಾಟೀಲ್‌

ಬಾಗಲಕೋಟೆ: ಕಾಂಗ್ರೆಸ್‌ ಬಹಳ ಜನರಿಗೆ ಅಧೀಕಾರ ಕೊಟ್ಟಿದೆ. ಸಂತೋಷದಿಂದ ಒಂದು ಮಾತು ಹೇಳಬೇಕೆಂದರೇ ಮೈಸೂರು ಮಹಾರಾಜರನ್ನು ಜನ ಪ್ರತಿನಿಧಿಯನ್ನಾಗಿ ಮಾಡಿದ ಪಕ್ಷ ಅದು ಕಾಂಗ್ರೆಸ್‌ ಪಕ್ಷ ಎಂದು ಶಿವಾನಂದ ಪಾಟೀಲ್‌ ಹೇಳಿದರು.

ಕಾಂಗ್ರೆಸ್‌ ಸಭೆ ಉದ್ದೇಶಿಸಿ ಮಾತನಾಡಿದ ಅವರು, ದೇಶದಲ್ಲೇ ಮೊದಲ ಬಾರಿಗೆ ರಾಜರನ್ನು ಜನಪ್ರತಿನಿಧಿಯನ್ನಾಗಿ ಮಾಡಬಹುದು ಎಂಬ ಕೆಲಸವನ್ನು ಯಾರಾದರು ಮಾಡಿದ್ದಾರೆ ಎಂದಾದರೇ ಅದು ಕಾಂಗ್ರೆಸ್‌ ಮಾತ್ರ. ಮೈಸೂರು ಮಹಾರಾಜ ಇವತ್ತು ರಸ್ತೆ ಮೇಲೆ ನಿಂತು ಮತ ಕೇಳುತ್ತಾನೆ. ಹಾಗೆ ಮಾಡಿದ್ದು ಕಾಂಗ್ರೆಸ್‌ನ ಶಕ್ತಿಯಾಗಿದೆ ಎಂದರು.

ಹಾಗೇಯೇ ರಾಜರನ್ನು ಪೋತರಾಜರನ್ನಾಗಿ ಮಾಡುವ ಶಕ್ತಿಯೂ ಕಾಂಗ್ರೆಸ್‌ ಪಕ್ಷಕ್ಕಿದೆ. ಪೋತರಾಜನನ್ನು ರಾಜನನ್ನಾಗಿ ಮಾಡುವ ಶಕ್ತಿ ಕಾಂಗ್ರೆಸ್‌ ಪಕ್ಷಕ್ಕಿದೆ. ಇಂತಹ ಒಂದು ಇತಿಹಾಸವಿರುವ ಪಕ್ಷವನ್ನು ಬೈಯುವುದು ಶೋಭೆ ತರುವುದಿಲ್ಲ.

ಇನ್ನು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ನೂರರಷ್ಟು ಬಹುಮತ ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Tags:
error: Content is protected !!