ಬೆಳಗಾವಿ: ʻಒನ್ ನೇಷನ್ ಒನ್ ಎಲೆಕ್ಷನ್ʼ ಶಿಫಾರಸ್ಸು ಬಗ್ಗೆ ದೇಶದಾದ್ಯಂತ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸುತ್ತಿದೆ. ಈ ನಡುವೆಯೇ ಕಾಂಗ್ರೆಸ್ ಸಚಿವ ಸಂತೋಷ್ ʻಒನ್ ನೇಷನ್ ಒನ್ ಎಲೆಕ್ಷನ್ʼ ಬಗ್ಗೆ ಮಾತನಾಡಿದ್ದು, ಇದನ್ನು ವೈಯಕ್ತಿಕವಾಗಿ ಸ್ವಾಗತಿಸುತ್ತೇನೆ ಎಂದು ಹೇಳಿದ್ದಾರೆ.
ಶುಕ್ರವಾರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ವೈಯಕ್ತಿಕವಾಗಿ ಇದನ್ನು ಸ್ವಾಗತಿಸುತ್ತೇನೆ. ಮೇಲ್ನೋಟದಲ್ಲಿ ಚನ್ನಾಗಿ ಕಾಣುತ್ತಿದೆ ಎಂದಿದ್ದಾರೆ.
ಮಾಜಿ ಪ್ರಧಾನಿ ದಿ.ಜವಹರ್‌ಲಾಲ್ ನೆಹರು ಅವರು 1964 ರಲ್ಲಿ ʻಒನ್ ನೇಷನ್ ಒನ್ ಎಲೆಕ್ಷನ್ʼ ಕುರಿತು ಕಲ್ಪನೆ ಮಾಡಿದ್ದರು. ಈಗ ಇದು ಯಾವ ರೀತಿ ಇದೆ ಗೊತ್ತಿಲ್ಲ ಎಂದರು.
ಡಿಜಿಟಲ್ ಇಂಡಿಯಾ, ಖೊಲೋ ಇಂಡಿಯಾ, ಮೆಕ್ ಇನ್ ಇಂಡಿಯಾ ಘೋಷಣೆಗಳಾಗಿವೆ. ಜಿಎಸ್‌ಟಿ ಘೋಷಣೆ ಮಾಡಿದರು. ಆದರೆ ಘೋಷಣೆಗಳ ಪರಿಣಾಮ ಏನಾಗಿದೆ? ಇದರಿಂದ ಅಭಿವೃದ್ಧಿ ಏನಾಗಿದೆ ಹೇಳಲಿ ಎಂದು ಪ್ರಶ್ನಿಸಿದ್ದಾರೆ.
ʻಒನ್ ನೇಷನ್ ಒನ್ ಎಲೆಕ್ಷನ್ʼ ಸ್ಲೋಗನ್ ಆಗಬಾರದು. ಇದು ಕೇವಲ ಪ್ರಚಾರ ಆಗಬಾರದು. ಕೇಂದ್ರ ಸರ್ಕಾರವು ಯೋಜನೆ ಹೆಸರಲ್ಲಿ ಅಭಿವೃದ್ಧಿಗಿಂತ ಪ್ರಚಾರ ಹೆಚ್ಚು ಮಾಡುತ್ತಿದೆ. 11 ವರ್ಷಗಳಿಂದ ಇದೆ ನಡೆಸುತ್ತಿದೆ ಎಂದು ಮೋದಿ ಸರ್ಕಾರದ ವಿರುದ್ಧ ಕಿಡಿಕಾಡಿದರು.