ಹಾಸನ: ಕಾಂಗ್ರೆಸ್ ಶೀಘ್ರವಾಗಿ ನೆಲಕ್ಕಚ್ಚಲಿದೆ ಎಂದು ಹೆಚ್.ಡಿ.ದೇವೆಗೌಡ ಭವಿಷ್ಯ ನುಡಿದಿದ್ದಾರೆ. ಅವರು ಹಾಸನ ಜಿಲ್ಲೆಯ ಆಲೂರಿನಲ್ಲಿ ಮಾತನಾಡುತ್ತ ಈ ಬಗ್ಗೆ ತಿಳಿಸಿದರು.
ಇದೇ ವೇಳೇ ಅವರು ಕಾಂಗ್ರೆಸ್ ಹೇಗೆ ಮೋಸ ಮಾಡುತ್ತದೆ ಅನ್ನುವುದಕ್ಕೆ ಈ ಉದಾಹರಣೆ ಸಾಕು.
ಇದು ಕಾಂಗ್ರೆಸ್‌ನ ದೌರ್ಬಲ್ಯ. ಮುಂದಿನ ದಿನಗಳಲ್ಲಿ ಈ ದೇಶದಲ್ಲಿ ಕಾಂಗ್ರೆಸ್ ಹಂತಹಂತವಾಗಿ ನೆಲಕಚ್ಚುತ್ತೆ ಎಂದ ಅವರು, ಜಗದೀಶ್ ಶೆಟ್ಟರ್ ಬಿಜೆಪಿ ಸೇರ್ಪಡೆಯಾಗಿರುವುದು ಸ್ವಾಗತ.
ಬಿಜೆಪಿಗೆ ಶಕ್ತಿ ಬರುತ್ತದೆ ಎನ್ನುವುದನ್ನು ಮನದಲ್ಲಿಟ್ಟುಕೊಂಡು ನಾಯಕರು ತೀರ್ಮಾನ ಮಾಡಿರುತ್ತಾರೆ ಅಂತ ಹೇಳಿದರು. ಇನ್ನೂ ಜಗದೀಶ್ ಶೆಟ್ಟರ್ ಸಮರ್ಥ ನಾಯಕರು.
ಮಾಜಿ ಮುಖ್ಯಮಂತ್ರಿಯಾಗಿದ್ದವರು. ಅವರನ್ನು ಕಾಂಗ್ರೆಸ್‌ನವರು ಪಕ್ಷಕ್ಕೆ ಉತ್ಸಾಹದಿಂದ ಸೇರಿಸಿಕೊಂಡರು. ಹೀಗೆ ಸೇರಿಸಿಕೊಂಡ ಮೇಲೆ ಅವರನ್ನು ಒಂದು ಮಂತ್ರಿ ಮಾಡುವಷ್ಟು ಸೌಜನ್ಯ ಬೇಡವೇ?. ನಾನು ಯಾರ ಬಗ್ಗೆಯೂ ನಿಂದನೆ ಮಾಡಲ್ಲ ಅಂತ ಹೇಳಿದರು.