ರಾಜ್ಯ ಸರ್ಕಾರವು ಇಂದಿರಾ ಕ್ಯಾಂಟೀನ್ ಯೋಜನೆಯಡಿಯಲ್ಲಿ ಆಹಾರ ಒದಗಿಸಲು ಮುಂದಾಗಿದ್ದು, ಇಂದು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಎಕ್ಸ್ ಖಾತೆಯಲ್ಲಿ ಏನೆಲ್ಲಾ ಆಹಾರಗಳು ಹಾಗೂ ಯಾವ ಬೆಲೆಯಲ್ಲಿ ಲಭ್ಯವಿರಲಿದೆ ಎಂದು ಪ್ರಕಟಿಸಿದ್ದಾರೆ. ಜನವರಿ 16ರಿಂದ ಇದು ಆರಂಭವಾಗಲಿದೆ ಎಂದು ತಿಳಿಸಿದೆ.
ಹಸಿದ ಹೊಟ್ಟೆಗೆ ಅಕ್ಷಯ ಪಾತ್ರೆ, ಅಗ್ಗದ ದರದಲ್ಲಿ ದೇಹಕ್ಕೆ ಒಗ್ಗುವ ಊಟ ಉಪಹಾರ ಎಂದು 5 ರೂಪಾಯಿಗಳಿಗೆ ಒಂದು ಪ್ಲೇಟ್ ಉಪಾಹಾರ, 10 ರೂಪಾಯಿಗೆ ಒಂದು ಪ್ಲೇಟ್ ಮಧ್ಯಾಹ್ನ ಊಟ ಹಾಗೂ 10 ರೂಪಾಯಿಗೆ ರಾತ್ರಿ ಊಟವನ್ನು ನೀಡಲು ಮುಂದಾಗಿದೆ.
ಬೆಳಗ್ಗಿನ ಉಪಹಾರ, ಪ್ಲೇಟ್‌ಗೆ 5 ರೂಪಾಯಿ ( ಬೆಳಗ್ಗೆ 7 ರಿಂದ 10 ): ಇಂಡ್ಲಿ – ಸಾಂಬಾರ್, ಇಂಡ್ಲಿ – ಚಟ್ನಿ, ವೆಜ್ ಪುಲಾವ್ – ರಾಯಿತಾ, ಖಾರಾಬಾತ್ – ಚಟ್ನಿ, ಚೌಚೌ ಬಾತ್ – ಚಟ್ನಿ, ಮಂಗಳೂರು ಬನ್ಸ್, ಬಿಸಿಬೇಳೆ ಬಾತ್ – ಬೂಂದಿ, ಪೊಂಗಲ್ – ಚಟ್ನಿ, ಬ್ರೆಡ್ – ಜಾಮ್ ಹಾಗೂ ಬನ್ಸ್. ವಿಶೇಷ: ಮಾವಿನಕಾಯಿ ಸೀಸನ್‌ನಲ್ಲಿ ಮಾವಿನಕಾಯಿ ಚಿತ್ರಾನ್ನ.
ಮಧ್ಯಾಹ್ನದ ಊಟ, ಪ್ಲೇಟ್‌ಗೆ 10 ರೂಪಾಯಿ ( ಮಧ್ಯಾಹ್ನ 1 ರಿಂದ 3 ): ಅನ್ನ – ತರಕಾರಿ ಸಾಂಬಾರು – ಖೀರು, ಅನ್ನ – ತರಕಾರಿ ಸಾಂಬಾರು – ರಾಯಿತಾ, ಅನ್ನ – ತರಕಾರಿ ಸಾಂಬಾರು – ಮೊಸರನ್ನ, ರಾಗಿಮುದ್ದೆ – ಸೊಪ್ಪಿನಸಾರು – ಖೀರು ಮತ್ತು ಚಪಾತಿ – ಸಾಗು – ಖೀರು.
ರಾತ್ರಿ ಊಟ, ಪ್ಲೇಟ್‌ಗೆ 10 ರೂಪಾಯಿ ( ಸಂಜೆ 7.30 ರಿಂದ ರಾತ್ರಿ 9 ) : ಅನ್ನ – ತರಕಾರಿ ಸಾಂಬಾರು, ಅನ್ನ – ತರಕಾರಿ ಸಾಂಬಾರು – ರಾಯಿತಾ, ರಾಗಿಮುದ್ದೆ – ಸೊಪ್ಪಿನಸಾರು ಮತ್ತು ಚಪಾತಿ ವೆಜ್ ಗ್ರೇವಿ.





