ಬಳ್ಳಾರಿ: ಸಂಡೂರು ಉಪ ಚುನಾವಣೆಯಲ್ಲಿ ಬಿಜೆಪಿಗೆ ಸೋಲು ಉಂಟಾಗಿದೆ. ಈ ಕುರಿತು ಪ್ರತಿಕ್ರಿಯಿಸಿದ ಪರಾಜಿತ ಅಭ್ಯರ್ಥಿ ಬಂಗಾರು ಹನುಮಂತ ಧರ್ಮದ ಚುನಾವಣೆಯಲ್ಲಿ ಅಧರ್ಮ ಗೆದಿದ್ದೆ. ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹಣದ ಹೊಳೆ ಹರಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಮ್ಮ ಪಕ್ಷದ ವರಿಷ್ಠರಿಗೆ ಕ್ಷೇತ್ರದಲ್ಲಿ ಗೆಲ್ಲವ ಭರವಸೆ ನೀಡಿದ್ದೆ. ಆದರೆ ಅದು ಸಾಧ್ಯವಾಗಲಿಲ್ಲ,
ಚುನಾವಣೆಯ ನನ್ನ ಸೋಲಿನ ಹೊಣೆಯನ್ನು ನಾನೇ ಹೊರುತ್ತೇನೆ. ಹಾಗಾಗಿ ಪಕ್ಷದ ವರಿಷ್ಠರಲ್ಲಿ ಕ್ಷಮೆಯಾಚಿಸುತ್ತೇನೆ. ಚುನಾಚಣೆ ವೇಳೆ ಪ್ರಚಾರದ ಮಾಡಿದ ಕಾರ್ಯಕರ್ತರಿಗೆ ಧನ್ಯವಾದಗಳನ್ನು ತಿಳಿಸಲು ಇಚ್ಛಿಸುತ್ತೇನೆ ಎಂದು ಹತಾಶೆಯಿಂದ ಹೇಳಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರು ಈ ಕ್ಷೇತ್ರದಲ್ಲಿ ಮೂರು ದಿನಗಳ ಕಾಲ ಪ್ರಚಾರ ಮಾಡಿದ್ದರಿಂದ ಮುಸ್ಲಿಮ್, ಕುರುಬ ಸಮುದಾಯದ ವೋಟುಗಳು ನಮಗೆ ಬಂದಿಲ್ಲ. ಅಲ್ಲದೇ ಶಿವರಾಜ ತಂಗಡಗಿ ಉಸ್ತುವಾರಿ ವಹಿಸಿದ್ದ ಭಾಗದಲ್ಲಿ ಹಣದ ಹೊಳೆಯನ್ನು ಹರಿಸಿದ್ದರು. ಕಾಂಗ್ರೆಸ್ ಹಣ ಖರ್ಚು ಮಾಡಿ ಹಾಗೂ ಗ್ಯಾರೆಂಟಿ ಹಣದ ಬಿಡುಗಡೆಯೂ ಚುನಾವಣೆಯಲ್ಲಿ ಕೆಲಸ ಮಾಡಿರುವುದರಿಂದ ಚುನಾವಣೆಯಲ್ಲಿ ಗೆದಿದ್ದೆ ಎಂದಿದ್ದಾರೆ.