Mysore
27
few clouds

Social Media

ಬುಧವಾರ, 10 ಡಿಸೆಂಬರ್ 2025
Light
Dark

ಸಂಸತ್‌ನಲ್ಲಿ ಕಲರ್ ಸ್ಮೋಕ್‌ ಬಾಂಬ್‌ ಪ್ರಕರಣ: ಮನೋರಂಜನ್‌ ಕುಟುಂಬಕ್ಕೆ ಸಂಕಷ್ಟ

ಮೈಸೂರು : ಬುಧವಾರ ಸಂಸತ್ತಿನ ಲೋಕಸಭಾ ಕಲಾಪಕ್ಕೆ ನುಗ್ಗಿ ಕಲರ್‌ ಸ್ಮೋಕ್‌ ಸಿಡಿಸಿದ ಪ್ರಕರಣ ಸಂಬಂಧ ಐವರನ್ನು ಬಂಧಿಸಲಾಗಿದೆ. ಇದರಲ್ಲಿ ಮೈಸೂರಿನ ಮನೋರಂಜನ್‌ ಎಂಬ ಯುವಕ ಕೂಡಾ ಸೇರಿದ್ದಾನೆ.

ಈ ಯುವಕ ಮಾಡಿದ ತಪ್ಪಿನ ಕಾರಣದಿಂದ ಅವರ ಕುಟುಂಬದವರಿಗೂ ಸಂಕಷ್ಟ ಎದುರಾಗಿದೆ.

ಶುಕ್ರವಾರ ಕೇಂದ್ರ ಹಾಗೂ ರಾಜ್ಯ ಗುಪ್ತಚರ ಇಲಾಖೆ ಅಧಿಕಾರಿಗಳು ಮೈಸೂರಿನ ವಿಜಯನಗರದಲ್ಲಿರುವ ಮನೋರಂಜನ್‌ ನಿವಾಸಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಹೋಗಿದ್ದರು.

ಇದೀಗ ಮನೋರಂಜನ್‌ ಪೋಷಕರಿಗೆ ಸೂಚನೆ ನೀಡಲಾಗಿದೆ. ಮನೋರಂಜನ್‌ ಕುಟುಂಬಸ್ಥರು ಮೈಸೂರು ಬಿಟ್ಟು ಎಲ್ಲೂ ತೆರಳದಂತೆ ಸೂಚನೆ ಕೊಡಲಾಗಿದೆ.

ನಮ್ಮ ಸೂಚನೆ ಸಿಗುವವರೆಗೂ ನೀವು ಮೈಸೂರಿನಲ್ಲಿರೇ ಇರಬೇಕು. ಮೈಸೂರು ಬಿಟ್ಟು ಎಲ್ಲೂ ಹೋಗಬಾರದು. ಒಂದು ವೇಳೆ ತೀರಾ ತುರ್ತು ಪರಿಸ್ಥಿತಿ ಇದ್ದರೆ ನಮ್ಮ ಗಮನಕ್ಕೆ ತಂದು, ನಮ್ಮ ಅನುಮತಿ ಪಡೆದೇ ಮೈಸೂರಿನಿಂದ ಹೊರಹೋಗಬೇಕು ಎಂದು ಗುಪ್ತಚರ ಇಲಾಖೆ ಅಧಿಕಾರಿಗಳು ಸೂಚನೆ ಕೊಟ್ಟಿದ್ದಾರೆ.

ಇನ್ನು ನಿಮಗೆ ಯಾವುದೇ ಕರೆ ಬಂದರೂ ಅವುಗಳನ್ನು ಸ್ವೀಕಾರ ಮಾಡಿ. ಹಾಗೆಯೇ ಎಲಿಂದ ಕರೆ ಬಂತು ಎಂಬ ಮಾಹಿತಿಯನ್ನು ಕಡ್ಡಾಯವಾಗಿ ನಮಗೆ ತಿಳಿಸಿ ಎಂದು ಮನೋರಂಜನ್‌ ಪೋಷಕರಿಗೆ ಗುಪ್ತಚರ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!