Mysore
24
few clouds

Social Media

ಮಂಗಳವಾರ, 09 ಡಿಸೆಂಬರ್ 2025
Light
Dark

Loksabha Election Results 2024 : ಬೆಂ. ಗ್ರಾಮಾಂತರದಲ್ಲಿ ಮಂಜುನಾಥ್‌ಗೆ 1.30 ಲಕ್ಷ ಮತಗಳ ಮುನ್ನಡೆ

ಬೆಂಗಳೂರು: ಇಂದು (ಜೂನ್‌.4) ಲೋಕಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ನಡೆಯುತ್ತಿದೆ. ರಾಜ್ಯದಲ್ಲಿ ಈ ಬಾರಿ ಬಿಜೆಪಿ-ಜೆಡಿಎಸ್‌ ಮೈತ್ರಿ ಪಕ್ಷ ಮತ್ತೊಮ್ಮೆ ಅಧಿಕಾರಕ್ಕೆ ಬರಲು ಎಲ್ಲಾ ಪ್ರಯತ್ನ ಮಾಡುತ್ತಿದೆ.

ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಈ ಬಾರಿ ಡಾ.ಸಿಎನ್‌ ಮಂಜುನಾಥ್‌ ಅವರು ಮಾಜಿ ಸಂಸದ ಡಿಕೆ ಸುರೇಶ್‌ ವಿರುದ್ಧ ಲಕ್ಷ ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಇದೇ ಮೊದಲ ಬಾರಿಗೆ ಡಿಕೆ ಸುರೇಶ್‌ ವಿರುದ್ಧ ವ್ಯಕ್ತಿಯೊಬ್ಬ ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ ಕಾಯ್ದುಕೊಂಡಿರುವುದಾಗಿದೆ.

ಬೆಳಿಗ್ಗೆ 11.40 ರ ವೇಳೆಗೆ ಡಾ. ಸಿಎನ್‌ ಮಂಜುನಾಥ್‌ ಅವರು 516145 ಮತ ಪಡೆದು ಮುನ್ನಡೆ ಸಾಧಿಸಿದರೇ, 386237 ಮತ ಪಡೆದಿರುವ ಕಾಂಗ್ರೆಸ್‌ನ ಡಿಕೆ ಸುರೇಶ್‌ ಹಿನ್ನಡೆ ಅನುಭವಿಸಿದ್ದಾರೆ. ಈ ಇಬ್ಬರ ನಡುವಿನ ಅಂತರ 129908 ಮತಗಳಾಗಿವೆ.

Tags:
error: Content is protected !!