ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ಭೀಕರ ಕಾಲ್ತುಳಿತ ದುರಂತದ ಬಗ್ಗೆ ಸಿಎಂ ಸಿದ್ದರಾಮಯ್ಯ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಆಪ್ತರ ಬಳಿಕ ಬೇಸರ ವ್ಯಕ್ತಪಡಿಸಿರುವ ಸಿಎಂ ಸಿದ್ದರಾಮಯ್ಯ ಅವರು, ಘಟನೆ ಬಗ್ಗೆ ಸ್ವಲ್ಪ ಮಾಹಿತಿ ಇದ್ದರೂ ವಿಧಾನಸೌಧದಲ್ಲಿ ಕಾರ್ಯಕ್ರಮ ಮಾಡುತ್ತಲೇ ಇರಲಿಲ್ಲ. ಕಾಲ್ತುಳಿತ ಘಟನೆ ಬಗ್ಗೆ ಅಧಿಕಾರಿಗಳು ತಡವಾಗಿ ಹೇಳಿದರು. ಸಾವಿನ ವಿಚಾರ ಗೊತ್ತಿದ್ದರೆ ವಿಧಾನಸೌಧದಲ್ಲಿ ಅಭಿನಂದನಾ ಸಮಾರಂಭ ಮಾಡುತ್ತಿರಲಿಲ್ಲ. ಕಾರ್ಯಕ್ರಮದ ವೇದಿಕೆಯನ್ನೂ ಹತ್ತುತ್ತಿರಲಿಲ್ಲ. ಆದರೆ ದುರಂತ ನಡೆದು ಹೋಗಿದೆ ಎಂದು ಭಾವುಕರಾಗಿದ್ದಾರೆ.
ಇದನ್ನೂ ಓದಿ:- ರಾಜ್ಯ ಸರ್ಕಾರವನ್ನು ಅಮಾನತಿನಲ್ಲಿಡಿ: ರಾಜ್ಯಪಾಲರಿಗೆ ನಾಗರಿಕ ಹಕ್ಕುಗಳ ಸಂಸ್ಥೆ ಮನವಿ





