Mysore
27
few clouds

Social Media

ಸೋಮವಾರ, 13 ಏಪ್ರಿಲ 2026
Light
Dark

ಕುಮಾರಸ್ವಾಮಿಗೆ ಆತ್ಮಗೌರವ ಇದ್ದಿದ್ದರೆ ಬಿಜೆಪಿ ಮೈತ್ರಿ ಒಪ್ಪುತ್ತಿರಲಿಲ್ಲ: ಸಿಎಂ ಸಿದ್ದರಾಮಯ್ಯ

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಜೆಡಿಎಸ್‌-ಬಿಜೆಪಿ ನಡುವಿನ ಮೈತ್ರಿಯನ್ನು ಗೇಲಿ ಮಾಡಿದ್ದು, ಮೊನ್ನೆಯವರಿಗೆ ಬಿಜೆಪಿಯನ್ನು ಬೈದಾಡಿಕೊಂಡು ತಿರುಗುತ್ತಿದ್ದ ಕುಮಾರಸ್ವಾಮಿ ಮತ್ತು ಜೆಡಿಎಸ್‌ ನಾಯಕರು ಈಗ ಬಿಜೆಪಿ ಜೊತೆ ಶಾಮೀಲಾಗಿದ್ದಾರೆ ಎಂದು ಕಾಲೆಳೆದಿದ್ದಾರೆ. ನಿಜಕ್ಕೂ ಕುಮಾರಸ್ವಾಮಿಗೆ ಸ್ವಲ್ಪವಾದರೂ ಆತ್ಮಗೌರವ ಇದ್ದಿದ್ದರೆ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುತ್ತಿರಲಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಗೇಲಿ ಮಾಡಿದ್ದಾರೆ.

2018 ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ 80 ಸೀಟಿ ಸಿಕ್ಕಿದ್ದರೂ ಕುಮಾರಸ್ವಾಮಿ ಜೊತೆ ಬಿಜೆಪಿ ಜತೆ ಸೇರಬಾರದು ಅನ್ನೋ ಒಂದೇ ಕಾರಣಕ್ಕೆ ಸಮ್ಮಿಶ್ರ ಸರ್ಕಾರ ಮಾಡಿ ಅವರನ್ನು ಮುಖ್ಯಮಂತ್ರಿ ಮಾಡಿದೆವು. ಅದಕ್ಕೆ ದೇವೆಗೌಡರ ಒಪ್ಪಿಗೆ ಸಹ ಇತ್ತು. 14 ತಿಂಗಳು ಕಾಲ ಚೆನ್ನಾಗಿ ನಡೆದಿದ್ದ ಸರ್ಕಾರವನ್ನು ಬೀಳಿಸಿದ್ದು ಯಡಿಯೂರಪ್ಪ ಎಂದು ಸಿದ್ದರಾಮಯ್ಯ ಗಟ್ಟಿಧ್ವನಿಯಲ್ಲಿ ಹೇಳಿದರು.

ಕುಮಾರಸ್ವಾಮಿ ಮತ್ತು ದೇವೇಗೌಡ ಅವರಿಗೆ ಕೊಂಚವಾದರೂ ಆತ್ಮಗೌರವ ಇದ್ದಿದ್ದರೆ ಬಿಜೆಪಿ ಮೈತ್ರಿ ಬೆಳೆಸುತ್ತಿರಲಿಲ್ಲ ಎಂದರು.

Tags:
error: Content is protected !!