ಬೆಂಗಳೂರು: ರಾಜ್ಯಪಾಲರು ಜಂಟಿ ಅಧಿವೇಶನದಲ್ಲಿ ರಾಷ್ಟ್ರಗೀತೆ ಹಾಡದೇ ಹೋಗಿದ್ದು ಸಂವಿಧಾನದ ಉಲ್ಲಂಘನೆಯಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಟೀಕೆ ಮಾಡಿದರು.
ಈ ಬಗ್ಗೆ ಸದನದಲ್ಲಿ ಇಂದು ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ರಾಜ್ಯಪಾಲರು ಅಷ್ಟು ಆತುರಾತುರವಾಗಿ ಹೋಗಬಾರದು. ಅವರು ಯಾರ ರಾಜ್ಯಪಾಲರು ಅಲ್ಲ. ಸಂವಿಧಾನದ ಮುಖ್ಯಸ್ಥ ರಾಜ್ಯಪಾಲರು ರಾಷ್ಟ್ರಗೀತೆ ಹಾಡಿ ಹೋಗಬೇಕಿತ್ತು. ಎಷ್ಟೇ ಭಾಷಣ ಮಾಡಲಿ ಆದರೆ ರಾಷ್ಟ್ರಗೀತೆ ಹಾಡಬೇಕಿತ್ತು. ರಾಷ್ಟ್ರಗೀತೆ ಹಾಡದೇ ಯಾಕೆ ಹೋಗಬೇಕಿತ್ತು. ಇದು ಸಂವಿಧಾನದ ಉಲ್ಲಂಘನೆ ಆಗಿದೆ. ನಾನು ಅವರ ಹಿಂದೆ ಓಡಿ ಹೋದೆ ಗೊತ್ತಾ ಎಂದು ಬಿಜೆಪಿ ನಾಯಕರನ್ನು ಪ್ರಶ್ನೆ ಮಾಡಿದರು.





