Mysore
23
overcast clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿಗೆ ಸಿಎಂ ಸಿದ್ದರಾಮಯ್ಯ ತಿರುಗೇಟು

ಬೆಂಗಳೂರು: ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರು, ನನ್ನ ಮಗ ಅಭಿಮನ್ಯು ಅಲ್ಲ ಅರ್ಜುನ ಆಗಿ ಬರುತ್ತಾನೆ ಎಂಬ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಖಿಲ್‌ ಈ ಹಿಂದೆ ಮಂಡ್ಯ ಹಾಗೂ ರಾಮನಗರ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಆ ಚುನಾವಣೆಗಳಲ್ಲಿ ಎರಡೂ ಸಲ ಸೋತಾಗ ಅಭಿಮನ್ಯು ಅರ್ಜುನ ಆಗಿರಲಿಲ್ವಾ? ಈ ಚುನಾವಣೆಯಲ್ಲಿ ಮಾತ್ರ ಇದ್ದಕ್ಕಿದ್ದಂತೆ ನಿಖಿಲ್‌ ಅರ್ಜುನ ಆಗ್ತಾರಾ ಎಂದು ವ್ಯಂಗ್ಯವಾಡಿದರು.

ಯಾವುದೇ ಕಾರಣಕ್ಕೂ ಉಪಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಗಳು ಗೆಲ್ಲುವುದಿಲ್ಲ. ನಾವೇ ಮೂರು ಕ್ಷೇತ್ರಗಳಲ್ಲೂ ಜಯಗಳಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

 

Tags: