Mysore
32
few clouds

Social Media

ಶನಿವಾರ, 07 ಮಾರ್ಚ್ 2026
Light
Dark

ಆರ್‌ಎಸ್‌ಎಸ್‌ನ್ನು ಎದುರಿಸಲು ನಾವು ಸಿದ್ಧ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: 1942ರಲ್ಲಿ ಬ್ರಿಟಿಷರೊಂದಿಗೆ ಸೇರಿಕೊಂಡಿದ್ದವರು. ನೀವು ಬ್ರಿಟಿಷರ ಏಜೆಂಟರು ಎಂದು ಬಿಜೆಪಿ ನಾಯಕರಿಗೆ ಸಿಎಂ ಸಿದ್ದರಾಮಯ್ಯ ಟಾಂಗ್‌ ಕೊಟ್ಟಿದ್ದಾರೆ.

ಈ ಕುರಿತು ವಿಧಾನಸಭೆಯಲ್ಲಿಂದು ಮಾತನಾಡಿದ ಅವರು, ಆರ್‌ಎಸ್‌ಎಸ್‌ ಹೇಳಿದಂತೆ ಬಿಜೆಪಿ ಮಾಡುತ್ತದೆ. ಆದ್ದರಿಂದ ಆರ್‌ಎಸ್‌ಎಸ್‌ನವರಿಗೆ ನಾವು ಹೆದರುವುದಿಲ್ಲ. ಅವರನ್ನು ಎದುರಿಸಲು ನಾವು ಸಿದ್ದ ಎಂದು ಪ್ರತಿಪಕ್ಷದವರಿಗೆ ತಿರುಗೇಟು ನೀಡಿದರು.

ಇನ್ನು ದಲಿತರ, ಹಿಂದುಳಿದವರ ಏಳಿಗೆ ಸಹಿಸದ ಬಿಜೆಪಿಗೆ ದಲಿತರು ದಲಿತರ ಕಾಲೋನಿಯಲ್ಲೇ ಇರಬೇಕು ಎನ್ನುವ ದುರುದ್ದೇಶವಿದೆ. 1942ರಲ್ಲಿ ಬ್ರಿಟಿಷರೊಂದಿಗೆ ಸೇರಿಕೊಂಡಿದ್ದವರು ನೀವು. ನೀವೇ ಬ್ರಿಟಿಷರ ಏಜೆಂಟರು ಎಂದು ಕಿಡಿಕಾರಿದರು.

 

Tags:
error: Content is protected !!