Mysore
27
overcast clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

12ನೇ ಶತಮಾನದಲ್ಲಿ ಶರಣರು ಸಾರಿದ ಬದುಕಿನ ಹಕ್ಕುಗಳೇ ಇಂದಿನ ಸಂವಿಧಾನದ ಆಶಯ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಬೆಳಗಾವಿಯ ಸುವರ್ಣಸೌಧಕ್ಕೆ ಶಾಲಾ ಪ್ರವಾಸಕ್ಕೆಂದು ಆಗಮಿಸಿದ ವಿದ್ಯಾರ್ಥಿಗಳಿಗೆ 12ನೇ ಶತಮಾನದಲ್ಲಿ ಶರಣರು ಸಾರಿದ ಬದುಕಿನ ಹಕ್ಕುಗಳೇ ಇಂದು ಸಂವಿಧಾನದ ಆಶಯಗಳಾಗಿವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಈ ಕುರಿತು ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿರುವ ಅವರು, ಶಾಲಾ ಪ್ರವಾಸಕ್ಕೆಂದು ಬೆಳಗಾವಿಯ ಸುವರ್ಣಸೌಧಕ್ಕೆ ಭೇಟಿ ನೀಡಿದ ವಿದ್ಯಾರ್ಥಿಗಳಿಗೆ 12ನೇ ಶತಮಾನದಲ್ಲಿಯೇ ಪ್ರಜಾಪ್ರಭುತ್ವ ಪರಿಕಲ್ಪನೆಯ ಮೇಲೆ ರೂಪುಗೊಂಡಿದ್ದ ಅನುಭವ ಮಂಟಪದ ಬಗ್ಗೆ ವಿವರಿಸಲಾಯಿತು ಎಂದು ಹೇಳಿದ್ದಾರೆ.

12ನೇ ಶತಮಾನದಲ್ಲಿನ ಶರಣರು ಸಾರಿದ ಸಮಾನತೆ, ಜಾತ್ಯತೀತತೆ, ಸಹಬಾಳ್ವೆ, ವ್ಯಕ್ತಿ ಸ್ವಾತಂತ್ರ್ಯ‌ ಘನತೆಯ ಬದುಕಿನ ಹಕ್ಕುಗಳೇ ಇಂದಿನ ನಮ್ಮ ಸಂವಿಧಾನದ ಆಶಯಗಳಾಗಿವೆ. ಇವು ಪ್ರತಿಯೊಬ್ಬರ ಆಶಯಗಳಾಗಬೇಕು ಎಂದಿದ್ದಾರೆ.

ವಿಶ್ವಮಾನವರಾಗಿ ಹುಟ್ಟುವ ಮಕ್ಕಳು ಜಾತಿ, ಧರ್ಮ, ವರ್ಣ, ಕಂದಾಚಾರ ಮುಂತಾದ ಸಂಕುಚಿತ ಚಿಂತನೆಯ ಪ್ರಭಾವಕ್ಕೆ ಒಳಗಾಗಿ ಅಲ್ಪ ಮಾನವರಾಗುತ್ತಿದ್ದಾರೆ. ಹೀಗಾಗಿ ಮಹಾಪುರುಷರ ಜೀವನಾದರ್ಶಗಳನ್ನು ವಿದ್ಯಾರ್ಥಿಗಳಿಗೆ ಬಾಲ್ಯದಲ್ಲಿಯೇ ತಿಳಿಸುವ ಮೂಲಕ ಅವರನ್ನು ಈ ಜಾತಿ, ಧರ್ಮ, ಮೂಢನಂಬಿಕೆಗಳ ಅಲ್ಪತನದಿಂದ ಮುಕ್ತಗೊಳಿಸಿ ವಿಶ್ವಮಾನವರನ್ನಾಗಿಸೋಣ ಎಂದು ಅಭಿಪ್ರಾಯಪಟ್ಟಿದ್ದಾರೆ.

Tags: