Mysore
26
few clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಬಿಜೆಪಿ ಅವಧಿಯಲ್ಲಿಯೂ ಹಗರಣ ನಡೆದಿದೆ, ತನಿಖೆ ಮಾಡಿಸಿ ಜೈಲಿಗೆ ಕಳುಹಿಸದೇ ಬಿಡಲ್ಲ ; ಸಿಎಂ ಸಿದ್ದರಾಮಯ್ಯ

ಬೆಂಗಳೂರು : ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಹಗರಣ ಕುರಿತು ಚರ್ಚೆಗೆ ವಿಧಾನಸಭೆಯಲ್ಲಿ ೧೨ ಪುಟಗಳ ಲಿಖಿತ ಉತ್ತರವನ್ನು ಸಿಎಂ ಸಿದ್ದರಾಮಯ್ಯ ನೀಡಿದ್ದು, ಬಿಜೆಪಿ ಅವಧಿಯಲ್ಲಿ ಹಲವು ಹಗರಣ ನಡೆದಿದ್ದು, ತನಿಖೆ ಮಾಡಿಸಿ ಜೈಲಿಗೆ ಕಳುಹಿಸದೇ ಬಿಡವುದಿಲ್ಲ ಎಂದು ಹೇಳಿದರು.

ವಿಧಾನಸಭೆಯಲ್ಲಿ ವಾಲ್ಮೀಕಿ ನಿಗಮದ ಮೇಲಿನ ಚರ್ಚೆಗೆ ಉತ್ತರ ನೀಡಿದ ಸಿಎಂ , ಬಿಜೆಪಿ ಅವಧಿಯಲ್ಲಿ ೨೧ ಹಗರಣ ನಡೆದಿದೆ. ಎಪಿಎಂಸಿ ಹಗರಣ, ಪ್ರವಾಸೋಧ್ಯಮ ಇಲಾಖೆಯಲ್ಲಿ ಅಕ್ರಮ, ಪಿಎಸ್‌ ಐ ನೇಮಕಾತಿಯಲ್ಲಿ ಅಕ್ರಮ, ಕೋವಿಡ್‌ ಹಗರಣ ಮುಂತಾದ ಹಗರಣಗಳು ನಡೆದಿವೆ . ನಿಮ್ಮನ್ನ ಕಳ್ಳರು ಲೂಟಿಕೋರರು ಅಂತ ಜನ ವಿಪಕ್ಷದಲ್ಲಿ ಕೂರಿಸಿದ್ದಾರೆ. ನಾವು ವಿಧಾನಸಭ ಚುನಾವಣೆಯಲ್ಲಿ ೧೩೬ ಸ್ಥಾನಗಳನ್ನ ಗೆದ್ದಿದ್ದೇವೆ. ಎಲ್ಲಾ ಹಗರಣಗಳನ್ನ ತನಿಖೆ ಮಾಡಿಸಿ ಜೈಲಿಗೆ ಕಳುಹಿಸದೆ ಬಿಡಲ್ಲ. ತಪ್ಪು ಮಾಡಿದವರನ್ನ ಜೈಲಿಗೆ ಕಳುಹಿಸುತ್ತೇವೆ ಎಂದರು.

ಅಲ್ಲದೆ ವಿರೋಧ ಪಕ್ಷದವರ ವಿರುದ್ಧ ೧೭೧ ಪ್ರಕರಣಗಳು ಇದೆ. ಸಂವಿಧಾನ ವಿರೋಧಿಸಿ RSS ನವರು ನಮಗೆ ಪಾಠ ಹೇಳಲು ಬರುತ್ತಾರೆ. ನಿಗಮಕ್ಕೆ ಮೀಸಲಿಟ್ಟ ಹಣ ಕದಿಯಲು ಬಿಡಲ್ಲ. ಕಳ್ಳತನ ಮಾಡರುವ ಕಳ್ಳರನ್ನು ಸಹ ಬಿಡುವುದಿಲ್ಲ. ವಾಲ್ಮೀಕಿ ನಿಗಮ ಹಗರಣದಲ್ಲಿ ಹಣಕಾಸು ಇಲಾಖೆಯ ಪಾತ್ರ ಇಲ್ಲ ಎಂದು ಸಷ್ಟನೆ ನೀಡಿದರು.

ಜೊತೆಗೆ ಎಸ್‌ ಐಟಿಯಿಂದ ನ್ಯಾಯಯುತ ತನಿಖೆ ಮಾಡಿಸಿದ್ದೇವೆ. ಕೇಂದ್ರದ ಕೆಳಗೆ ಬರುವುದರಿಂದ ಸಿಬಿಐ ಕೇಳುತ್ತಿದ್ದಾರೆ. ಯಾವ ಹಗರಣದ ಬಗ್ಗೆ ಇಡಿ ಬಂದಿರಲಿಲ್ಲ. ವಾಲ್ಮೀಕಿ ನಿಗಮದಲ್ಲಿ ಯಾರನ್ನೂ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ಸಿಎಂ ಹೇಳಿದರು.

Tags: