Mysore
22
broken clouds
Light
Dark

ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಅರೆಸ್ಟ್‌ ಆಗಬಹುದು; ಪ್ರಹ್ಲಾದ್‌ ಜೋಶಿ ಅಚ್ಚರಿಯ ಹೇಳಿಕೆ

ಬೆಂಗಳೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಅವರೇ ಅರೆಸ್ಟ್‌ ಆಗಬಹುದು ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಈ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರೇ ನೀವು ನಮ್ಮನ್ನು ಬಂಧಿಸುತ್ತೀರಾ.? ಮುಡಾ ಪ್ರಕರಣದಲ್ಲಿ ನೀವೇ ಅರೆಸ್ಟ್‌ ಆಗಬಹುದು. ಅಗತ್ಯಬಿದ್ದರೆ ಈ ಪ್ರಕರಣದಲ್ಲಿ ನಾವು ಕಾನೂನು ಹೋರಾಟಕ್ಕೂ ಮುಂದಾಗುತ್ತೇವೆ. ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಸೈಟ್‌ ನನ್ನ ಧರ್ಮಪತ್ನಿ ಹೆಸರಲ್ಲಿದೆ ಅಂತಾರೆ. ನೀವು ಅಧಿಕಾರಕ್ಕೆ ಬಂದ ಕೂಡಲೇ ಇದನ್ನು ಗಮನಿಸಿ ವಾಪಸ್‌ ಕೊಡಬೇಕಿತ್ತು. ಈಗ 50:50 ಅನುಪಾತವೇ ಇಲ್ಲ. ನಿಮಗೆ ಜಮೀನು ಕೊಟ್ಟವನ ಅಸ್ತಿತ್ವವೇ ಯಕ್ಷ ಪ್ರಶ್ನೆಯಾಗಿದೆ. ಕೂಡಲೇ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

1985ರಲ್ಲಿ ಇಂದಿರಾಗಾಂದಿ ಸರ್ವಾಧಿಕಾರಿಯಾಗಿದ್ದರು. 2023-24ರಲ್ಲಿ ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ವಾಧಿಕಾರಿಯಾಗಿದ್ದಾರೆ. ನಮಗೆ ಹೋರಾಟ ಮಾಡುವ ಹಕ್ಕು ಇಲ್ವಾ.? ಕಾಂಗ್ರೆಸ್‌ ಪಕ್ಷದ ಹೈಕಮಾಂಡ್‌ಗೆ ಕಮಾಂಡ್‌ ಇದ್ದರೆ, ಸಿಎಂ ಸಿದ್ದರಾಮಯ್ಯನವರ ರಾಜೀನಾಮೆಯನ್ನು ಪಡೆಯಿರಿ ಎಂದು ಹೇಳಿರುವ ಪ್ರಹ್ಲಾದ್‌ ಜೋಶಿ, ಸಿದ್ದರಾಮಯ್ಯ ಅವರೇ ಇಂದಿರಾಗಾಂಧಿ ಕೂಡ ಹೀಗೆ ಇದ್ದರು. ನನ್ನನ್ನು ತಡೆಯುವವರು ಯಾರೂ ಇಲ್ಲವೆಂದು ಭಾವಿಸಿದ್ದರು ಎಂದು ಕಿಡಿಕಾರಿದರು.