ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರು ಇಂದು 16ನೇ ಬಜೆಟ್ ಮಂಡನೆ ಮಾಡುತ್ತಿದ್ದು, ಬೆಂಗಳೂರಿಗೆ ಭರ್ಜರಿ ಗಿಫ್ಟ್ ನೀಡಿದ್ದಾರೆ.
ವಿಧಾನಸೌಧದಲ್ಲಿ ಇಂದು(ಮಾರ್ಚ್.7) ಬಜೆಟ್ ಪ್ರಾರಂಭಿಸುವ ಮುನ್ನ ಗೋಪಾಲಕಷ್ಣ ಅಡಿಗ ಹಾಗೂ ಕುವೆಂಪು ಅವರ ನುಡಿಗಳನ್ನು ಹೇಳಿದ್ದರು. ಬಳಿಕ ಮಂಡಿನ ನೋವಿನ ಕಾರಣ ಸ್ಪೀಕರ್ ಯು.ಟಿ.ಖಾದರ್ ಅವರಿಗೆ ಕುಳಿತುಕೊಂಡು ಬಜೆಟ್ ಮಂಡಿಸಲು ಅನುಮತಿ ಕೇಳಿದ್ದು, ಹಲವಾರು ಇಲಾಖೆಗಳಿಗೆ ಭರ್ಜರಿ ಬಹುಮಾನ ನೀಡಿದ್ದಾರೆ.
ಈ ಬಾರಿಯ ಬಜೆಟ್ 4,09,549 ರೂ.ಗಳ ಗಾತ್ರವಾಗಿದ್ದು, ಸುಮಾರು 4 ಲಕ್ಷ ಕೋಟಿ ರೂ.ದಾಟಿದೆ. ಅದರಲ್ಲಿ ಬೆಂಗಳೂರಿನಲ್ಲಿ ಟನಲ್ ಯೋಜನೆಗೆ 40ಸಾವಿರ ಕೋಟಿ ರೂ. ಘೋಷಿಸಿದ್ದಾರೆ. ಅಲ್ಲದೇ ಮೆಟ್ರೋ ಸೇವೆಯನ್ನು ದೇವನಹಳ್ಳಿಯವರೆಗೂ ವಿಸ್ತರಿಸಲಾಗುವುದು ಎಂದು ಹೇಳಿದ್ದಾರೆ.
ಶಾಲಾ ವಿದ್ಯಾರ್ಥಿಗಳಿಗೆ ವಾರದಲ್ಲಿ ಆರು ದಿನಗಳ ಕಾಲ ಮೊಟ್ಟೆ, ಬಾಳೆಹಣ್ಣು ನೀಡಲು 1,500 ಕೋಟಿ ಮೀಸಲಿರಿಸಲಾಗಿದೆ. ಕೈಗಾರಿಕಾ ಮತ್ತು ಉತ್ಪಾದನಾ ವಲಯದ ಅಭಿವೃದ್ಧಿಗೆ ಬದ್ಧವಾಗಿದ್ದು, 2030ರ ವೇಳೆಗೆ 20 ಲಕ್ಷ ಉದ್ಯೋಗ ಸೃಷ್ಠಿಸುವ ಗುರಿ ಹೊಂದಿದೆ ಎಂದಿದ್ದಾರೆ.
ಇನ್ನು ಅತಿಥಿ ಉಪನ್ಯಾಸಕರಿಗೆ 2,000 ಸಾವಿರ ರೂ. ಗೌರವಧನವನ್ನು ನೀಡಲಾಗುವುದು. ಅಲ್ಲದೇ ಸರ್ಕಾರದ ವಿವಿಧ ಫಲಾನುಭವಿಗಳಿಗೆ ಮಧ್ಯವರ್ತಿಗಳಿಲ್ಲದೆ 1 ಲಕ್ಷ ಕೋಟಿ ರೂ. ಹಣವನ್ನು ವರ್ಗಾಯಿಸಲಾಗಿದೆ. ಕಲ್ಯಾಣ ಇಲಾಖೆಗಳ ಮೂಲಕ ಅಸಹಾಯಕರನ್ನು ಬಲಗೊಳಿಸಲು ಆಯವ್ಯಯ ನೆರವಾಗಲಿದೆ ಎಂದು ತಿಳಿಸಿದ್ದಾರೆ.





