ಬೆಂಗಳೂರು : ನಿನ್ನೆ ಹಾಲಿನ ದರ ಏರಿಕೆ ಮಾಡಿದ್ದು ಕೆಎಂಎಫ್ ಸರ್ಕಾರವಲ್ಲ ಎಂದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಅದನ್ನು ಸಮರ್ಥನೆ ಮಾಡಿಕೊಳ್ಳುವ ಮೂಲಕ ಉಲ್ಟಾ ಹೊಡೆದಿದ್ದಾರೆ.
ನಗರದಲ್ಲಿಂದು ಹಾಲಿನ ದರ ಹೆಚ್ಚಳ ಬಗ್ಗೆ ಮಾಧ್ಯಮದವರೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಹಾಲಿನ ದರವನ್ನು ಹೆಚ್ಚಿಸಿಲ್ಲ, ಹಾಲಿನ ಪ್ಯಾಕೆಟ್ ಗಳಲ್ಲಿ ಹೆಚ್ಚುವರಿ ಹಾಲನ್ನು ನೀಡಲಾಗುತ್ತಿದೆ. ಅರ್ಧ ಲೀಟರ್ ಪ್ಯಾಕೆಟ್ ನಲ್ಲಿ 50 ಎಂಎಲ್ ಮತ್ತು ಒಂದು ಲೀಟರ್ ಪ್ಯಾಕೆಟ್ ನಲ್ಲಿ 100 ಮಿ ಲೀ ಹಾಲನ್ನು ಹೆಚ್ಚುವರಿಯಾಗಿ ನೀಡಲಾಗುತ್ತಿದೆ. ಈ ಹೆಚ್ಚುವರಿ ಹಾಲಿಗೆ ರೂ. 1 ಮತ್ತು ರೂ 2 ಹೆಚ್ಚು ನೀಡುವಂತೆ ಬಳಕೆದಾರರನ್ನು ಕೇಳಲಾಗುತ್ತಿದೆ ಎಂದು ಹೇಳಿದರು.
ಇದೇ ವೇಳೆ ಜನ ನಮಗೆ ಹೆಚ್ಚುವರಿ ಹಾಲು ಬೇಕಿಲ್ಲ ಎನ್ನುತ್ತಿದ್ದಾರೆ ಇದಕ್ಕೆ ಏನು ಹೇಳ್ತಿರಾ ಎಂದು ಕೇಳಿದ್ದಕ್ಕೆ ಸಿದ್ದರಾಮಯ್ಯ ಫುಲ್ ಗರಂ ಆದರು. ಹೆಚ್ಚು ಉತ್ಪಾದನೆ ಆಗಿರುವ ಹಾಲನ್ನು ಚೆಲ್ಲಬೇಕಾ? ಎಂದು ಪ್ರಶ್ನೆ ಮಾಡಿದರು. ಬಿಜೆಪಿ ಆಡಳಿತಾವಧಿಯಲ್ಲಿ 90 ಲಕ್ಷ ಲೀಟರ್ ಹಾಲು ಉತ್ಪತ್ತಿಯಾಗುತಿತ್ತು, ಈಗ 99 ಲಕ್ಷ ಹಾಲು ಮಾರಾಟಕ್ಕೆ ಲಭ್ಯವಾಗುತ್ತಿದೆ, ಬಿಜೆಪಿಯವರು ಏನೋ ಹೇಳ್ತಾರೆ ಅಂದಾಕ್ಷಣ ಅದನ್ನೇ ನಂಬಿ ಬರೆದುಬಿಡಬೇಡಿ, ಕೊಂಚ ವಿವೇಚನೆ ಬಳಸಿ ಎಂದು ಸಿಎಂ ಹೇಳಿದರು.
ಹೆಚ್ಚು ಉತ್ಪಾದನೆ ಆಗಿರುವ ಹಾಲನ್ನು ಚೆಲ್ಲಕಾಗುತ್ತಾ..? ಸಿಎಂ ಹೀಗೆ ಹೇಳಿದ್ಯಾಕೆ





