Mysore
16
clear sky

Social Media

ಭಾನುವಾರ, 14 ಡಿಸೆಂಬರ್ 2025
Light
Dark

ಬಿಜೆಪಿ ವಿರುದ್ಧ ಸುಳ್ಳು ಜಾಹೀರಾತು ಆರೋಪ: ಸಿಎಂ, ಡಿಸಿಎಂಗೆ ಜಾಮೀನು

ಬೆಂಗಳೂರು: ಕಳೆದ ವರ್ಷ ನಡೆದ ಕರ್ನಾಟಕ ವಿಧಾನ ಸಭಾ ಚುನಾವಣೆ ವೇಳೆ ಕಾಂಗ್ರೆಸ್‌ ಪಕ್ಷ, ಬಿಜೆಪಿ ವಿರುದ್ಧ ಸುಳ್ಳು ಅಪಪ್ರಚಾರದ ಜಾಹೀರಾತು ನೀಡಿದ ಆರೋಪದ ಮೇಲೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್‌ ಹಾಗೂ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ವಿರುದ್ಧ ಸಮನ್ಸ್‌ ನೀಡಲಾಗಿತ್ತು.

ವಿಧಾನಸಭಾ ಚುನಾವಣೆ ವೇಳೆ ಬಿಜೆಪಿ ವಿರುದ್ಧ ಕಾಂಗ್ರೆಸ್‌ 40% ಕಮಿಷನ್‌ ಆರೋಪ ಮಾಡಿತ್ತು. ಮತ್ತು ಪೇ ಸಿಎಂ ಪೋಸ್ಟರ್‌ ಅಂಟಿಸಿ ಪ್ರತಿಭಟನೆ ನಡೆಸಿತ್ತು. ಇದರಿಂದ ಬಿಜೆಪಿಗೆ ಧಕ್ಕೆ ತಂದ ಆರೋಪದಡಿ ಮಾನನಷ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ(ಜೂನ್‌.೧) ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್‌ ಅವರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಹಾಜರಾಗಿದ್ದರು.

42ನೇ ಎಸಿಎಂಎಂ ನ್ಯಾಯಾಧೀಶರಾದ ಕೆ.ಎನ್‌ ಶಿವಕುಮಾರ್‌ ಅವರು ವಿಚಾರಣೆ ನಡೆಸಿದ್ದು, ಸಿಎಂ ಮತ್ತು ಡಿಸಿಎಂಗೆ ಜಾಮೀನು ಮಂಜೂರು ಮಾಡಿದ್ದಾರೆ. ಈ ಇಬ್ಬರು ನಾಯಕರು ನಾಯಕರು ಬಾಂಡ್‌ಗೆ ಸಹಿ ಹಾಕಿ ಬಳಿಕ ನ್ಯಾಯಾಲಯದಿಂದ ವಾಪಸಾಗಿದ್ದಾರೆ.

ಬಿಜೆಪಿ ಪರ ವಿನೋದ್‌ ಕುಮಾರ್‌ ವಾದ ಮಂಡಿಸಿದರೇ, ಆಡಳಿತ ಪಕ್ಷದ ಪರವಾಗಿ ಎಜಿ ಎಸ್‌.ಎ ಅಹಮದ್‌ ವಾದ ಮಂಡಿಸಿದರು.

ಇನ್ನು ಮೂರನೇ ಬಾರಿಗೂ ಕೋರ್ಟ್‌ ಸಮನ್ಸ್‌ ನೀಡಿಯೂ ವಿಚಾರಣೆಗೆ ಹಾಜರಾಗದಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ವಿರುದ್ಧ ಕೋರ್ಟ್‌ ಅಸಮಧಾನ ವ್ಯಕ್ತಪಡಿಸಿದ್ದು, ರಾಗಾ ಗೆ ವಿನಾಯಿತಿ ನೀಡಬೇಕೋ ಅಥವಾ ವಾರೆಂಟ್‌ ನೀಡಬೇಕೋ ಎಂಬ ಬಗ್ಗೆ ಇಂದು ಮದ್ಯಾಹ್ನ 3 ಗಂಟೆಗೆ ಕೋರ್ಟ್‌ ತೀರ್ಪು ಪ್ರಕಟಿಸಲಿದೆ.

ಕೋರ್ಟ್‌ನಿಂದ ವಾಪಸಾಗುವಾಗ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಬಿಜೆಪಿ ನಮ್ಮ ವಿರುದ್ಧ ಸಿವಿಲ್‌ ರೂಪದ ಖಾಸಗಿ ಕೇಸ್‌ ದಾಖಲಿಸಿದ್ದಾರೆ. ನಾವು ಕಾನೂನು ಪಾಲಕರಾಗಿದ್ದು, ಹಾಗಾಗಿ ಕೋರ್ಟ್‌ ಮುಂದೆ ಹಾಜರಾಗಿದ್ದೇವೆ. ನನ್ನ ಹಾಗೂ ರಾಹುಲ್‌ ವಿರುದ್ಧ ದೂರು ದಾಖಲಾಗಿತ್ತು. ಇಂದು ನನಗೆ ಜಾಮೀನು ಸಿಕ್ಕಿದ್ದು, ರಾಹುಲ್‌ ಗಾಂಧಿ ಕೋರ್ಟ್‌ ಮುಂದೆ ಹಾಜರಾಗುತ್ತಾರೆ ಎಂದು ಸಿಎಂ ಸ್ಪಷ್ಟನೆ ನೀಡಿದರು.

Tags:
error: Content is protected !!