ದಾವಣಗೆರೆ: 2028ಕ್ಕೆ ಎಚ್.ಡಿ.ಕುಮಾರಸ್ವಾಮಿ ಸಿಎಂ ಎಂಬ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಜಮೀರ್ ಅಹಮ್ಮದ್ ಖಾನ್ ವ್ಯಂಗ್ಯವಾಡಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಎಲ್ಲರೂ ರಾತ್ರಿ ಕನಸು ಕಂಡರೆ ಎಚ್‌ಡಿಕೆ ಹಗಲುಗನಸು ಕಾಣುತ್ತಾರೆ. ಸಿದ್ದರಾಮಯ್ಯ ಇದ್ದಾಗ 59 ಸ್ಥಾನ ಗೆದ್ದಿದ್ದರು. 2023ಕ್ಕೆ ಅಧಿಕಾರಕ್ಕೆ ಬರುತ್ತೇವೆ ಎಂದು ನಿಂತುಕೊಂಡರು. ಕೇವಲ 19 ಸ್ಥಾನ ಗೆದ್ದರು. ಬಿಜೆಪಿ ಜೊತೆ ಸೇರಿ ಜೆಡಿಎಸ್ ಶಕ್ತಿ ಕಳೆದುಕೊಂಡಿದೆ. ಎಚ್‌ಡಿಕೆಯದ್ದು ಹಗಲುಗನಸು ಕಾಣುವ ಚಟ ಎಂದು ಲೇವಡಿ ಮಾಡಿದರು.





