Mysore
19
broken clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಧರ್ಮಸ್ಥಳ ಮಂಜುನಾಥನ ದರ್ಶನ ಪಡೆದ ಸಿಎಂ, ಡಿಸಿಎಂ

ದಕ್ಷಿಣ ಕನ್ನಡ: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಅವರು ಇಂದು (ಮೇ.25)  ಧರ್ಮಸ್ಥಳಕ್ಕೆ ಭೇಟಿ ನೀಡಿ ಮಂಜುನಾಥನ ದರ್ಶನ ಪಡೆದರು.

ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಸಚಿವ ಸಂಪುಟದ ಸಹದ್ಯೋಗಿಗಳು  ಮುಖ್ಯದ್ವಾರದಿಂದ  ದೇವಸ್ಥಾನದವರೆಗೆ ನಡೆದುಕೊಂಡೇ ಹೋದರು. ದೇವಸ್ಥಾನದ ಬಳಿ ಎರಡು ಆನೆಗಳು  ದ್ವಾರದ ಬಳಿ ನಿಂತು ಗಣ್ಯರಿಗೆ ನಮಸ್ಕರಿಸಿತು.

ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡಿಯವರು ಗಣ್ಯರನ್ನು ಬರಮಾಡಿಕೊಂಡರು. ಈ ವೇಳೆ ವಾದ್ಯಘೋಷಗಳು ಮೊಳಗಿದ್ದವು. ನೆಚ್ಚಿನ ನಾಯಕರನ್ನು ನೋಡಲು ಸಾಕಷ್ಟು ಜನ ನೆರೆದಿದ್ದರು.

ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್‌ ಅವರು ವಿರೇಂದ್ರ ಹೆಗ್ಗಡೆ ಅವರ ಬಳಿ ಹಲವು ವಿಷಯಗಳನ್ನು ಚರ್ಚಿಸಿದರು.

 

 

Tags: