ಬೆಂಗಳೂರು: ನಾನು ಯಾವುದೇ ಸ್ಥಾನ ಹುಡುಕಿಕೊಂಡು ಹೋಗಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ರಾಜ್ಯ ಕಾಂಗ್ರೆಸ್‌ನಲ್ಲಿ ಅಧಿಕಾರ ಹಂಚಿಕೆ ಮುಂದಿನ ಸಿಎಂ ವಿಚಾರ ಬಗ್ಗೆ ಚರ್ಚೆ ಮುನ್ನೆಲೆಗೆ ಬರುತ್ತಲೇ ಇದೆ. ಡಿ.ಕೆ.ಶಿವಕುಮಾರ್ ಅವರಿಗೆ ಸಿಎಂ ಪಟ್ಟ ನೀಡುವಂತೆ ಅವರ ಅಭಿಮಾನಿಗಳು ಹಾಗೂ ಬೆಂಬಲಿಗರು ಆಗ್ರಹಿಸುತ್ತಲೇ ಬಂದಿದ್ದಾರೆ. ಇದೀಗ ಬಿಜೆಪಿ ಎಂಎಲ್‌ಸಿ ಎಚ್.ವಿಶ್ವನಾಥ್ ಅವರೂ ಸಹ ಡಿಕೆಶಿ ಪರ ಬ್ಯಾಟ್ ಬೀಸಿದ್ದು, ಭಾರೀ ಸಂಚಲನ ಸೃಷ್ಟಿಯಾಗಿದೆ.
ಈ ಬಗ್ಗೆ ಬೆಂಗಳೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈಗ ಅರ್ಜೆಂಟ್ ಯಾವುದೂ ಇಲ್ಲ. ಏನೇ ಇದ್ದರೂ ಸಹ ನಮ್ಮ ಪಕ್ಷ ತೀರ್ಮಾನಿಸುತ್ತದೆ. ನಾನು ಯಾವುದೇ ಸ್ಥಾನವನ್ನು ಹುಡುಕಿಕೊಂಡು ಹೋಗಲ್ಲ ನನಗೆ ಯಾವುದೇ ಸ್ಥಾನ ಹುಡುಕಿ ಹೋಗುವ ಅಗತ್ಯವಿಲ್ಲ. ಪಕ್ಷಕ್ಕೆ ಏನು ಮಾಡಬೇಕೋ ಅದನ್ನು ಮಾಡುತ್ತೇನೆ. ಮಿಕ್ಕಿದ್ದನ್ನೆಲ್ಲಾ ಪಕ್ಷವೇ ತೀರ್ಮಾನ ಮಾಡುತ್ತದೆ ಎಂದು ತಿಳಿಸಿದ್ದಾರೆ.
ಆದರೆ ಡಿ.ಕೆ.ಶಿವಕುಮಾರ್ ಅವರ ಅಭಿಮಾನಿಗಳು ಸಿಎಂ ಪಟ್ಟವನ್ನು ಡಿಕೆಶಿಗೆ ಬಿಟ್ಟುಕೊಡುವಂತೆ ದಿನದಿಂದ ದಿನಕ್ಕೆ ಆಗ್ರಹಿಸುತ್ತಲೇ ಇದ್ದು, ಇದು ಮುಂದಿನ ದಿನಗಳಲ್ಲಿ ಯಾವ ಮಟ್ಟಕ್ಕೆ ತಲುಪುತ್ತದೆ ಎಂಬುದನ್ನು ಕಾದುನೋಡಬೇಕಿದೆ.