Mysore
26
scattered clouds

Social Media

ಸೋಮವಾರ, 23 ಡಿಸೆಂಬರ್ 2024
Light
Dark

ಗಂಡು ಮಗುವಿಗೆ ಜನ್ಮ ನೀಡಿದ ೧೦ನೇ ತರಗತಿಯ ವಿದ್ಯಾರ್ಥಿನಿ!

ಕಲಬುರ್ಗಿ:   10 ನೇ ತರಗತಿ ವಿದ್ಯಾರ್ಥಿನಿ ಗಂಡು ಮಗುವಿಗೆ ಜನ್ಮ ನೀಡಿರುವ ಘಟನೆ ಕಲಬುರ್ಗಿಯಲ್ಲಿ ನಡೆದಿದೆ.

ಜಿಲ್ಲೆಯ ಆಳಂದ ತಾಲೂಕಿನಲ್ಲಿ ಈ ಘಟನೆ ನಡೆದಿದ್ದು, ವಿದ್ಯಾರ್ಥಿನಿಯ ದೊಡ್ಡಪ್ಪನ ಮಗನೇ ಕೃತ್ಯ ಎಸಗಿರುವುದಾಗಿ ಬಯಲಾಗಿದೆ. ಅಲ್ಲದೇ ಪ್ರಕರಣ ಸಂಬಂಧ ಆರೋಪಿ ಅಣ್ಣನನ್ನು ಕೂಡ ಆಳಂದ ಪೊಲೀಸರು ಬಂಧಿಸಿದ್ದಾರೆ.

ವಿದ್ಯಾರ್ಥಿನಿ ಕಲಬುರಗಿ ಜಿಲ್ಲೆಯಲ್ಲಿರುವ ವಸತಿ ಶಾಲೆಯೊಂದರಲ್ಲಿ ಓದುತ್ತಿದ್ದಳು. ಶಾಲೆಗೆ ರಜೆ ಇದ್ದಾಗೆಲ್ಲ ಆಕೆ ಮನೆಗೆ ಬರುತ್ತಿದ್ದಳು. ಹೀಗೆ ಬಂದಾಗ ಸಹೋದರ ಆಕೆಯನ್ನು ಬಳಸಿಕೊಳ್ಳುತ್ತಿದ್ದನು.

ರಾತ್ರಿ ಹೊತ್ತು ಮನೆಯಲ್ಲಿ ಎಲ್ಲರೂ ಮಲಗಿದ್ದಾಗ ಆತ ತಂಗಿ ಎನ್ನುವುದನ್ನೂ ನೋಡದೇ ರೇಪ್‌ ಮಾಡುತ್ತಿದ್ದ. ಹೀಗೆ ಕಳೆದ ಮಾರ್ಚ್ ನಿಂದ ವಿದ್ಯಾರ್ಥಿನಿ ಹಲವು ಬಾರಿ ತನ್ನ ಅಣ್ಣನಿಂದ ಅತ್ಯಾಚಾರಕ್ಕೆ ಒಳಗಾಗಿದ್ದಳು.

ಅಲ್ಲದೇ ಈ ವಿಚಾರವನ್ನು ಬಾಯಿಬಿಟ್ಟರೆ ಕೊಲೆ ಮಾಡುವ ಬೆದರಿಕೆಯನ್ನು ಕೂಡ ಹಾಕಿದ್ದನು. ಹೀಗಾಗಿ ಆಕೆ ಅತ್ಯಾಚಾರ ವಿಚಾರವನ್ನು ಮುಚ್ಚಿಟ್ಟಿದ್ದಳು.

ಇತ್ತ ವಿದ್ಯಾರ್ಥಿನಿ ದಪ್ಪ ಇರೋದ್ರಿಂದ ಕುಟುಂಬಸ್ಥರು ಕೂಡ ಆಕೆಯ ದೇಹದಲ್ಲಿ ಆಗುತ್ತಿರುವ ಬದಲಾವಣೆ ಕಂಡು ಹಿಡಿಯುವ ಪ್ರಯತ್ನ ಮಾಡಿಲ್ಲ. ಆದರೆ ಡಿಸೆಂಬರ್‌ 24 ರಂದು ಶಾಲೆಯಲ್ಲಿ ಇದ್ದಾಗ ಆಕೆಗೆ ಜೋರಾಗಿ ಹೊಟ್ಟೆ ನೋವು ಕಾಣಿಸಿಕೊಂಡಿದೆ.

ಹೀಗಾಗಿ ಶಿಕ್ಷಕರಿಗೆ ಹೇಳಿ ಆಕೆ ಸಂಬಂಧಿಕರ ಮನೆಗೆ ತೆರಳಿದ್ದಾಳೆ. ನಂತರ ಸಂಬಂಧಿಕರು‌ ವಿದ್ಯಾರ್ಥಿನಿ ಕುಟಂಬದವರಿಗೆ ಮಾಹಿತಿ ನೀಡಿದ್ದಾರೆ. ಬಳಿಕ‌ ಆಕೆಯನ್ನು ಮಹಾರಾಷ್ಟ್ರದ ಸೊಲ್ಲಾಪುರದ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲು ಮಾಡಲಾಯಿತು.

ಚಿಕತ್ಸೆಗೆ ದಾಖಲು ಮಾಡುತ್ತಿದ್ದಂತೆಯೇ ಆಕೆ ಗಂಡು ಮಗುವಿಗೆ ಜನ್ಮ ಕೊಟ್ಟಿದ್ದಾಳೆ. ವಿದ್ಯಾರ್ಥಿನಿ ಗಂಡು ಮಗುವಿಗೆ ಜನ್ಮ ಕೊಟ್ಟಿರುವ ವಿಚಾರ ಗೊತ್ತಾಗ್ತಿದ್ದಂತೆ ಕುಟುಂಬಸ್ಥರು ಕೂಡ ಶಾಕ್‌ ಆಗಿದ್ದಾರೆ.

ಈಕೆಗೆ ಮದುವೆಯೇ ಆಗಿಲ್ಲ ಮಗುವಿಗೆ ಜನ್ಮ ಅಂದ್ರೆ ಹೇಗೆ ಅಂತಾ ಮಾತಾಡಿಕೊಳ್ಳಲು ಆರಂಭಿಸಿದರು. ಬಳಿಕ ಆಸ್ಪತ್ರೆಯವರು ಮಹಾರಾಷ್ಟ್ರದ ಪೊಲೀಸರಿಗೆ ಮಾಹಿತಿ ರವಾನೆ ಮಾಡಿದರು.

ಮಹಾರಾಷ್ಟ್ರ ಪೊಲೀಸರು ನಿಂಬರ್ಗಾ ಪೊಲೀಸರನ್ನು ಸಂಪರ್ಕ ಮಾಡಿ ನಿಂಬರ್ಗಾ ಪೊಲೀಸರು ವಿದ್ಯಾರ್ಥಿನಿಯ ವಿಚಾರಣೆ ನಡೆಸಿದರು. ಈ ವೇಳೆ ಅಣ್ಣನಿಂದ ಕೃತ್ಯ ಆಗಿರುವುದು ಬಯಲಾಗಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ