ಬೆಂಗಳೂರು : ನಗರದ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ ಸಂಸ್ಥೆಯ ಇಬ್ಬರು ವಿದ್ಯಾರ್ಥಿನಿಯರಲ್ಲಿ ಕಾಲರಾ ರೋಗ ಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಹಾಸ್ಟೆಲ್ ವಿರುದ್ಧ ಸಮೋಟೋ ಕೆ ಎಸ್ ದಾಖಲಾಗಿದೆ ಎಂದು ಮಹಿಳಾ ಆಯೋಗದ ಅಧ್ಯಕ್ಷ ನಾಗಲಕ್ಷ್ಮಿ ಚೌದರಿ ತಿಳಿಸಿದರು.
ಆಸ್ಪತ್ರೆಗೆ ಭೇಟಿ ನೀಡಿ ವಿದ್ಯಾರ್ಥಿಯರ ಆರೋಗ್ಯವನ್ನು ವಿಚಾರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಭೇಟಿಯ ವೇಳೆ ಅನೇಕ ವಿದ್ಯಾರ್ಥಿಗಳಿಗೆ ಪ್ರಜ್ಞೆ ಇರಲಿಲ್ಲ. ಒಂದು ವಾರದಲ್ಲಿ ವರದಿಯನ್ನು ಕೊಡೋಕೆ ಹೇಳಿದ್ದೇನೆ.ಒಂದು ವಾರದಲ್ಲಿ ಸಮಸ್ಯೆ ಬಗ್ಗೆ ಹರಿಸಲು ಹೇಳಿದ್ದೇನೆ. ಪ್ರಕರಣ ಕುರಿತಂತೆ ಹಾಸ್ಟೆಲ್ ವಿರುದ್ಧ ಸುಮೊಟೊ ಕೇಸ್ ದಾಖಲಾಗಿದೆ ಎಂದು ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌದರಿ ಹೇಳಿಕೆ ನೀಡಿದ್ದಾರೆ.
ಕೆಲವರು ಪಿಜಿ ಮಾಡುತ್ತಿದ್ದಾರೆ. ಅವರೆಲ್ಲರೂ ಕೂಡ ಭೇಟಿ ಮಾಡಿದಾಗ ಅವರಿಗೆ ವಾಂತಿ ಭೇದಿ ಹಾಗೂ ಹೊಟ್ಟೆನೋವು ಶುರುವಾಯಿತು ಅಂತ ಹೇಳಿದರು. ಕೆಲವರು ಪ್ರಜ್ಞೆನೆ ಕಳೆದುಕೊಂಡಿದ್ದಾರೆ ಅವ್ರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ಈಗ ಎಲ್ಲರೂ ಚೆನ್ನಾಗಿದ್ದಾರೆ ಇದಕ್ಕೆಲ್ಲ ಕಾರಣ ಐದನೇ ಮಹಡಿಯಲ್ಲಿ ಇರುವ ನೀರಿನ ಟ್ಯಾಂಕ್ ನೀರು. ಇದುವರೆಗೂ ಅದೇ ನೀರನ್ನು ಮಕ್ಕಳಿಗೆ ಅದೇ ನೀರನ್ನು ಪೂರೈಸಲಾಗಿದೆ.ಹೀಗಾಗಿ ಇದೀಗ ಹಾಸ್ಟೆಲ್ ವಿರುದ್ಧ ಸುಮೊಟೊ ಕೇಸ್ ದಾಖಲಾಗಿದೆ.