Mysore
15
scattered clouds

Social Media

ಶನಿವಾರ, 20 ಡಿಸೆಂಬರ್ 2025
Light
Dark

ಚಿಕ್ಕಮಗಳೂರು: ಶರಣಾದ ನಕ್ಸಲರ ಶಸ್ತ್ರಾಸ್ತ್ರ ವಶಪಡಿಸಿದ ಪೊಲೀಸರು

ಚಿಕ್ಕಮಗಳೂರು: ದಕ್ಷಿಣ ಭಾರತದ ಮೊಸ್ಟ್‌ ವಾಂಟೆಂಡ್‌ನ ಆರು ನಕ್ಸಲರು ಮುಖ್ಯವಾಹಿನಿಗೆ ಬಂದ ಬೆನ್ನಲ್ಲೇ ಪೊಲೀಸರು ಅರಣ್ಯದಲ್ಲಿ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿ ಮೂಲಗಳು ತಿಳಿಸಿವೆ.

ನಕ್ಸಲರು ಬುಧವಾರ(ಜ.8) ರಂದು ಮುಖ್ಯವಾಹಿನಿಗೆ ಬಂದು ಶರಣಾಗಿದ್ದರು. ಬಳಿಕ ಶರಣಾಗತಿಯ ವೇಳೆ ಯಾವುದೇ ಶಸ್ತ್ರಾಸ್ತ್ರಗಳನ್ನು ಸರ್ಕಾರಕ್ಜಕೆ ಹಸ್ತಾಂತರ ಮಾಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಪೊಲೀಸರು ಶಸ್ತ್ರಾಸ್ತ್ರಗಳನ್ನು ಪತ್ತೆ ಹಚ್ಚುವ ಕಾರ್ಯಾಚರಣೆಯಲ್ಲಿದ್ದು ಅವರಿಗೆ, ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಜಯಪುರ ವ್ಯಾಪ್ತಿಗೊಳಪಡುವ ಕಿತ್ತಲೆಗುಳಿ ಬಳಿಯ ಅರಣ್ಯದಲ್ಲಿ ಆರು ಬಂದೂಕು ಮತ್ತು ಮದ್ದು ಗುಂಡುಗಳು ಸಿಕ್ಕಿವೆ. ಅವುಗಳನ್ನು ಈಗಾಗಲೇ ವಶಪಡಿಸಿಕೊಳ್ಳಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಪೊಲೀಸರು ಅರಣ್ಯದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಒಂದು ಎ.ಕೆ-56, ಮೂರು 303 ರೈಫಲ್‌, ಹನ್ನೆರಡು ಬೋರ್‌ ಎಸ್‌ಬಿಬಿಎಲ್‌ ಹಾಗೂ ಒಂದು ಸ್ವದೇಶ ನಿರ್ಮಿತ ಬಂದೂಕು ದೊರೆತಿದೆ. ಅಲ್ಲದೇ 7.62 ಎಂಎಂ ಎ.ಕೆ. ಮದ್ದು ಗುಂಡು-11, 303-ರೈಫಲ್‌ ಮದ್ದು ಗುಂಡು-133, ಎ.ಕೆ.-56 ಖಾಲಿ ಮ್ಯಾಗಿನ್‌-01, 12 ಬೋರ್‌ ಕಾರ್ಟೀಡ್ಜಸ್‌-24, ಸ್ವದೇಶ ನಿರ್ಮಿತ ಪಿಸ್ತೂಲ್‌ ಮದ್ದು ಗುಂಡು-8 ಸೇರಿದಂತೆ ಒಟ್ಟು 176 ಮದ್ದು ಗುಂಡುಗಳನ್ನು ದೊರೆತಿವೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ ಜಯಪುರ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಚಿಕ್ಕಮಗಳೂರು ಜಿಲ್ಲೆಯ ಎಸ್‌ಪಿ ವಿಕ್ರಮ್‌ ಅಮಟೆ ತಿಳಿಸಿದ್ದಾರೆ.

Tags:
error: Content is protected !!