ಚಿಕ್ಕಬಳ್ಳಾಪುರ: ಸುಮಾರು 60ಕ್ಕೂ ಹೆಚ್ಚು ಕುರಿಗಳು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಚಿಂತಾಮಣಿ ತಾಲ್ಲೂಕಿನ ಕಾಚಹಳ್ಳಿಯಲ್ಲಿ ನಡೆದಿದೆ.
ಸಾವಿಗೆ ನಿಖರ ಕಾರಣ ತಿಳಿದಿಲ್ಲ. ಘಟನಾ ಸ್ಥಳಕ್ಕೆ ಪಶುಪಾಲನೆ ಹಾಗೂ ಪಶುವೈದ್ಯಕೀಯ ಇಲಾಖೆಯ ವೈದ್ಯರು ಭೇಟಿ ನೀಡಿ ಉಳಿದ ಕುರಿಗಳಿಗೆ ಚಿಕಿತ್ಸೆ ನೀಡಿದ್ದಾರೆ.
ಗ್ರಾಮದ ಜಾಫರ್ ಖಾನ್ ಹಾಗೂ ಖುರ್ಷಿದ್ ಮತ್ತು ಮಾಲೀಕ್ ಎಂಬುವವರು ಸುಮಾರು 200 ಕುರಿಗಳನ್ನು ಹೊರಗಡೆ ಮೇಯಿಸಿಕೊಂಡು ಬಂದಿದ್ದಾರೆ.
ಸಾಯಂಕಾಲ ಮನೆಗೆ ಬರುತ್ತಲೇ ಒಂದೊಂದಾಗಿ ಸುಮಾರು 50 ಕುರಿಗಳು ಸತ್ತು ಹೋಗಿವೆ.
ಯಾವುದಾದರೂ ರಾಸಾಯನಿಕವನ್ನು ಸಿಂಪಡಿಸಿದ್ದ ಹುಲ್ಲನ್ನು ತಿಂದಿರಬಹುದು ಅಥವಾ ನೀರನ್ನು ಕುಡಿದಿರಬಹುದು ಎಂಬ ಅನುಮಾನವಿದೆ ಎಂದು ಕುರಿಗಳ ಮಾಲೀಕರು ಬೇಸರ ವ್ಯಕ್ತಪಡಿಸಿದ್ದಾರೆ.





