ಚನ್ನಪಟ್ಟಣ: ಸಂಸದ ಯದುವೀರ್ ಕೃಷ್ಣದತ್ತ ಒಡೆಯರ್ ಇಂದು(28) ಚನ್ನಪಟ್ಟಣದಲ್ಲಿ ನಿಖಿಲ್ ಪರವಾಗಿ ಖುದ್ದು ಪ್ರಚಾರ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ಚನ್ನಪಟ್ಟಣ ಉಪ ಚುನಾವಣೆಗೆ ಸಂಬಂಧಿಸಿದಂತೆ ಯದುವೀರ್ ಅವರು ತಾವಾಗಿಯೇ ಸಮಯ ಮಾಡಿಕೊಂಡು ನಿಖಿಲ್ ಪ್ರಚಾರ ಮಾಡುತ್ತಿದ್ದಾರೆ. ಅದಕ್ಕಾಗಿ ನಾನು ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದರು.
ರಾಮನಗರ ಜಿಲ್ಲೆ ಹಾಗೂ ಚನ್ನಪಟ್ಟಣ ತಾಲ್ಲೂಕಿನಾದ್ಯಂತ ಸಾಕಷ್ಟು ಅಭಿಮಾನಿಗಳು ಯದುವೀರ್ ಅವರಿಗೆ ಇದ್ದಾರೆ. ಹೀಗಾಗಿ ಅವರೇ ಇನ್ನೂ ನಾಲ್ಕು ದಿನಗಳ ಕಾಲ ಪ್ರಚಾರ ಮಾಡಲಿದ್ದಾರೆ. ಅಲ್ಲದೇ, ಇಂದು ನಾನು ಅವರೊಂದಿಗೆ ತಾಲ್ಲೂಕಿನ 8 ರಿಂದ 10 ಗ್ರಾಮಗಳಿಗೆ ಪ್ರಚಾರಕ್ಕಾಗಿ ತೆರಳಲಿದ್ದೇನೆ ಎಂದು ಹೇಳಿದರು.