ಬೆಂಗಳೂರು: ಈಗಿನ ಆರೋಗ್ಯ ಸಚಿವರ ಆರೋಗ್ಯವೇ ಸರಿಯಿಲ್ಲ. ಹಾಗಾಗಿ ಅವರಿಗೆ ಆರೋಗ್ಯ ಸಚಿವರಾಗಲು ಯೋಗ್ಯತೆಯೇ ಇಲ್ಲ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ವ್ಯಂಗ್ಯವಾಡಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಫ್ರೀಡಂ ಪಾರ್ಕ್‌ನಲ್ಲಿ ಶುಶ್ರೂಷಕರು ಪ್ರತಿಭಟನೆ ನಡೆಸುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವಿರುದ್ಧ ಕಿಡಿಕಾರಿದರು.
ಈಗಿನ ಆರೋಗ್ಯ ಸಚಿವರಿಗೆ ಆರೋಗ್ಯವೇ ಸರಿಯಿಲ್ಲ. ಒಂದು ವೇಳೆ ಅವರು ಇಲ್ಲಿಗೆ ಬಂದರೆ ನೀವು ಎಲ್ಲರೂ ಸೇರಿಕೊಂಡು ಅವರಿಗೆ ಆರೋಗ್ಯ ತಪಾಸಣೆ ಮಾಡಿ ಚಿಕಿತ್ಸೆ ಕೊಡಿ ಎಂದು ಲೇವಡಿ ಮಾಡಿದರು.
ಅಧಿವೇಶನದಲ್ಲಿ ನಿಮ್ಮ ಸಮಸ್ಯೆಗಳ ಬಗ್ಗೆ ನಾನು ಹೋರಾಟ ಮಾಡುತ್ತೇನೆ. ಸಿಎಂ ಜೊತೆಗೂ ನಾನು ಮಾತನಾಡುತ್ತೇನೆ ಎಂದು ಹೇಳಿದರು.





