Mysore
28
overcast clouds

Social Media

ಭಾನುವಾರ, 28 ಡಿಸೆಂಬರ್ 2025
Light
Dark

ಗೋವಾ ಸರ್ಕಾರದಿಂದ ಮತ್ತೆ ಕ್ಯಾತೆ : ನಾಳೆ ಮಹದಾಯಿ ಜಲಾನಯನ ಪ್ರದೇಶಕ್ಕೆ ಕೇಂದ್ರ ತಂಡ ವಿಸಿಟ್‌

ಬೆಳಗಾವಿ : ಮಹದಾಯಿ ಯೋಜನೆಗೆ ಗೋವಾ ಸರ್ಕಾರದಿಂದ ಮತ್ತೆ ಕ್ಯಾತೆ ತೆಗೆಯಲಾಗಿದ್ದು, ನಾಳೆ ಜಲನಯನ ಪ್ರದೇಶಕ್ಕೆ ಕೇಂದ್ರ ತಂಡ ಭೇಟಿ ನೀಡಲಿದೆ. ಕೇಂದ್ರ ಸರ್ಕಾರದ ಮೇಲೆ ಗೋವಾ ಸಿಎಂ ಪ್ರಮೋದ್‌ ಸಾವಂತ ಒತ್ತಡ ಹಾಕಿದ್ದಾರೆ. ಗೋವಾ ಸರ್ಕಾರದ ಒತ್ತಡಕ್ಕೆ ಮಣಿದು ಕೇಂದ್ರ ಸರ್ಕಾರ ಮಹಾದಾಯಿ ಪ್ರವಾಹ ತಂಡ ರಚನೆ ಮಾಡಿದ್ದು, ಈ ಬಗ್ಗೆಖುದ್ದು ಗೋವಾ ಸಿಎಂ ಪ್ರಮೋದ್‌ ಸಾವಂತ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ.

ಗೋವಾ ಸರ್ಕಾರದ ಒತ್ತಡದಿಂದ ಮಹದಾಯಿ ಪ್ರವಾಹ ತಂಡ ಕಣಕುಂಬಿಗೆ ಭೇಟಿ ನೀಡುತ್ತಿದೆ ಎಂದು ಬರೆದುಕೊಂಡಿದ್ದಾರೆ.

ಇನ್ನು ನಾಳೆ ಜಿಲ್ಲೆಯ ಖಾನಾಪುರ ತಾಲೂಕಿಮ ಕಣಕುಂಬಿ ಜಲಾನಯನ ಪ್ರದೇಶಕ್ಕೆ ಕೇಂದ್ರದ ಅಧಿಕಾರಿಗಳ ತಂಡ ಭೇಟಿ ನೀಡಿ ಸದ್ಯದ ವಸ್ತು ಪರಿಸ್ಥಿತಿ ಹಾಗೂ ನೀರು ಹರಿದು ಎಲ್ಲಿಗೆ ಹೋಗ್ತಿದೆ ಎಂದು ಪರಿಶೀಲನೆ ನಡೆಸಲಿದ್ದಾರೆ.

Tags:
error: Content is protected !!