ಬೀದರ್: ರಾಜ್ಯದಲ್ಲಿ ಕಾಂಗ್ರೆಸ್‌ಗೆ ಆಡಳಿತ ಮಾಡಲು ಬರುತ್ತಿಲ್ಲ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಆರೋಪಿಸಿದ್ದಾರೆ.
ಈ ಕುರಿತು ಬೀದರ್‌ನಲ್ಲಿ ಮಾತನಾಡಿದ ಅವರು, ಮಂಗಳೂರಿನಲ್ಲಿ ಕೇವಲ ಹಿಂದೂ ಹಾಗೂ ಮುಸ್ಲಿಮರಷ್ಟೇ ಅಲ್ಲ. ಎಲ್ಲಾ ಧರ್ಮದವರು ಇದ್ದಾರೆ. ಎಲ್ಲರೂ ಶಾಂತಿಯಿಂದ ಬದುಕುವುದು ಮುಖ್ಯ.
ಗೃಹ ಸಚಿವ ಪರಮೇಶ್ವರ್ ತುಂಬಾ ಒಳ್ಳೆಯವರು. ಹಿಂದಿನಿಂದಲೂ ಅವರ ಬಗ್ಗೆ ಗೊತ್ತಿದೆ. ಆದರೆ, ಅವರ ಕೈಗಳನ್ನು ಕಟ್ಟಿ ಹಾಕಲಾಗಿದೆ. ಅವರಿಗೆ ಬಹಳಷ್ಟು ಒತ್ತಡಗಳಿವೆ. ಆದ್ದರಿಂದ ಪರಿಸ್ಥಿತಿ ಹೀಗಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.





