ಹುಬ್ಬಳ್ಳಿ: ಖರೀದಿಸಲು ಕಾಂಗ್ರೆಸ್ ಶಾಸಕರೇನು ಕುರಿ, ಕೋಣ, ಕತ್ತೆಗಳಾ? ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರಶ್ನಿಸಿದ್ದಾರೆ.
ಈ ಬಗ್ಗೆ ಹುಬ್ಬಳ್ಳಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅವರು ತಮ್ಮ ಹಾಗೂ ಸರ್ಕಾರದ ಮೇಲಿರುವ ಆರೋಪಗಳ ವಿಚಾರಕ್ಕೆ ಬಿಜೆಪಿಯ ಮೇಲೆ ಹೀಗೆಲ್ಲಾ ಹೇಳುತ್ತಿದ್ದಾರೆ. ಶಾಸಕರ ಸಾರ್ವಜನಿಕ ಬದುಕನ್ನು ಕಲುಷಿತಗೊಳಿಸುವ ಸಲುವಾಗಿ ಸಿದ್ದರಾಮಯ್ಯ ಈ ರೀತಿಯ ಹೇಳಿಕೆಗಳನ್ನು ನೀಡಬಾರದು ಎಂದರು.
ಕಾಂಗ್ರೆಸ್‌ನ ಒಬ್ಬ ಶಾಸಕನಿಗೆ 50 ಕೋಟಿ ರೂಪಾಯಿ ಅಂದರೆ 2500 ಕೋಟಿ ರೂಪಾಯಿಗಳಷ್ಟು ಆಗುತ್ತದೆ. ಸಿಎಂ ಸಿದ್ದರಾಮಯ್ಯಗೆ ಈ ವಿಚಾರದ ಬಗ್ಗೆ ಸ್ವಲ್ವವಾದರೂ ಸೆನ್ಸ್ ಇದೆಯಾ? ಸಿಎಂ ರಾಜಕಾರಣ ಮಾಡಬೇಕೆಂಬ ಕಾರಣಕ್ಕೆ ಹೀಗೆಲ್ಲಾ ಹೇಳುವುದು ಸರಿಯಲ್ಲ ಎಂದು ಕಿಡಿಕಾರಿದರು.





