ಮೈಸೂರು: ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ 3454 ಕೋಟಿ ರೂಪಾಯಿ ಬರ ಪರಿಹಾರವನ್ನು ಬಿಡುಗಡೆ ಮಾಡಿದೆ. ಅತ್ತ ತಮಿಳುನಾಡಿಗೆ ನೆರೆ ಪರಿಹಾರವೆಂದು 275 ಕೋಟಿ ರೂಪಾಯಿಗಳನ್ನೂ ಸಹ ಇದೇ ವೇಳೆ ಬಿಡುಗಡೆಗೊಳಿಸಿದೆ.
ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಿನಲ್ಲಿ ರಾಜ್ಯ ಸರ್ಕಾರ 18174 ಕೋಟಿ ರೂಪಾಯಿಗಳನ್ನು ಬರ ಪರಿಹಾರವನ್ನಾಗಿ ಕೊಡಬೇಕೆಂದು ಬೇಡಿಕಯನ್ನು ಇಟ್ಟಿತ್ತು. ಹೀಗೆ ರಾಜ್ಯ ಸರ್ಕಾರದಿಂದ ಬೇಡಿಕೆ ಬಂದರೂ ಸಹ ಕೇಂದ್ರ ಸರ್ಕಾರ ಪರಿಹಾರವನ್ನು ಬಿಡುಗಡೆ ಮಾಡಿರಲಿಲ್ಲ. ಹೀಗಾಗಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೊರೆಹೋಗಿತ್ತು.
ಬಳಿಕ ಕೇಂದ್ರ ಸರ್ಕಾರ ಸೋಮವಾರದೊಳಗೆ ಪರಿಹಾರ ಧನವನ್ನು ನೀಡುವುದಾಗಿ ಒಪ್ಪಿಕೊಂಡಿತ್ತು. ಅದರಂತೆ ಇದೀಗ ಕೇಂದ್ರ ಸರ್ಕಾರ ಬರ ಪರಿಹಾರ ಧನವನ್ನು ನೀಡಲಾಗಿದೆ.





