Mysore
22
overcast clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಬೆಂಗಳೂರು: ಸ್ಪಾನಲ್ಲಿ ವೇಶ್ಯಾವಾಟಿಕೆ, 44 ಮಹಿಳೆಯರ ರಕ್ಷಣೆ

ಬೆಂಗಳೂರಿನ ಮಹದೇವಪುರ ವ್ಯಾಪ್ತಿಯಲ್ಲಿರುವ ಓಲ್ಡ್ ಮದ್ರಾಸ್ ರಸ್ತೆಯ ನಿರ್ವಾಣ ಸ್ಪಾ ಮೇಲೆ ದಾಳಿ ನಡೆಸಿ 4 ಗಂಟೆ ಪರಿಶೀಲಿಸಿದ ಬಳಿಕ ಸ್ಪಾ ಹೆಸರಿನಡಿಯಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದ್ದ ವಿಷಯ ಬೆಳಕಿಗೆ ಬಂದಿದೆ‌.

ಹೊಸ ರಾಜ್ಯ ಹಾಗೂ ವಿದೇಶಗಳಿಂದ ಯುವತಿಯರನ್ನು ಕರೆಸಿ ದಂಧೆ ನಡೆಸಲಾಗುತ್ತಿತ್ತು ಎಂಬ ಮಾಹಿತಿ ಈ ವೇಳೆ ಹೊರಬಿದ್ದಿದ್ದು, ಈ ದಾಳಿಯಲ್ಲಿ 44 ಮಹಿಳೆಯರನ್ನು ರಕ್ಷಣೆ ಮಾಡಿ, 34 ಆರೋಪಗಳನ್ನು ವಶಕ್ಕೆ ಪಡೆಯಲಾಗಿದೆ.

ಇನ್ನು ಅನಿಲ್ ಎಂಬಾತ ಹೊರ ರಾಜ್ಯದಿಂದ ಬಂದು ಇಲ್ಲಿ ಸ್ಪಾ ನಡೆಸುತ್ತಿದ್ದ ಎಂದು ತಿಳಿದುಬಂದಿದ್ದು, ಮಹದೇವಪುರ ಠಾಣೆಯಲ್ಲಿ ಪ್ರಕರಣ ದಾಖಲಾದ ನಂತರ ಸಿಸಿಬಿ ಮಹಿಳಾ ಸಂರಕ್ಷಣಾ ದಳ ದಾಳಿ ನಡೆಸಿದೆ. ಕಾನೂನುಬಾಹಿರವಾಗಿ ಬಾಡಿ ಟು ಬಾಡಿ‌ ಮಸಾಜ್ ಮತ್ತು ಇನ್ನಿತರ ಅನೈತಿಕ ಚಟುವಟಿಕೆಗಳು ಬಹುಮಹಡಿ ಅಂತಸ್ತಿನ ಕಟ್ಟಡದಲ್ಲಿ ನಡೆಸುತ್ತಿದ್ದ ಅನಿಲ್ ಸದ್ಯ ಪೊಲೀಸರ ಅತಿಥಿಯಾಗಿದ್ದಾನೆ‌.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ