Mysore
19
few clouds

Social Media

ಮಂಗಳವಾರ, 20 ಜನವರಿ 2026
Light
Dark

ಸೆ.22ರಿಂದ ಅಕ್ಟೋಬರ್.‌7ರವರೆಗೆ ಜಾತಿಗಣತಿ ಮರು ಸಮೀಕ್ಷೆ

caste census in india (1)

ಬೆಂಗಳೂರು: ಆಡಳಿತಾರೂಢ ಕಾಂಗ್ರೆಸ್ ಸರ್ಕಾರಕ್ಕೆ ಸಾಕಷ್ಟು ಇರಿಸುಮುರಿಸು ಉಂಟು ಮಾಡಿದ್ದ ಹಿಂದುಳಿದ ವರ್ಗಗಳ ಆಯೋಗದ ವರದಿ ಕೈಬಿಟ್ಟ ಬೆನ್ನಲ್ಲೇ ಇದೀಗ ಸೆ.22ರಿಂದ ಅ.7ರವರೆಗೆ ಜಾತಿಗಣತಿ ಮರುಸಮೀಕ್ಷೆ ನಡೆಯಲಿದೆ.

ರಾಜ್ಯ ಶಾಶ್ವತ ಹಿಂದುಳಿದ ವರ್ಗ ಯೋಗದಿಂದ ಜಾತಿಗಣತಿ ಸಮೀಕ್ಷೆ ನಡೆಯಲಿದ್ದು, ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ನೆಪದಲ್ಲಿ ಮತ್ತೆ ಜಾತಿಗಣತಿ ಸಮೀಕ್ಷೆಯನ್ನು ನಡೆಸಲಾಗುತ್ತಿದೆ.

ರಾಜ್ಯಾದ್ಯಂತ ಹಿಂದುಳಿದ ವರ್ಗಗಳ ಆಯೋಗದಿಂದ ಸೆಪ್ಟೆಂಬರ್.22ರಿಂದ ಅಕ್ಟೋಬರ್.7ರವರಗೆ ಒಟ್ಟು 15 ದಿನಗಳ ಕಾಲ ಸಮೀಕ್ಷೆ ನಡೆಯಲಿದೆ. ಒಳ ಮೀಸಲಾತಿ ಸಮೀಕ್ಷೆ ಮಾದರಿಯಲ್ಲಿಯೇ ಜಾತಿಗಣತಿ ಸಮೀಕ್ಷೆ ನಡೆಸಲು ಮುಂದಾಗಿರುವ ಸರ್ಕಾರ ಶಿಕ್ಷಕರ ಮೂಲಕ ಮನೆ ಮನೆ ಸರ್ವೆ ನಡೆಸಲು ಸರ್ಕಾರದ ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.

ಸಮೀಕ್ಷೆಯಲ್ಲಿ ಒಟ್ಟು 1.65 ಲಕ್ಷ ಗಣತಿದಾರರನ್ನು ಬಳಸಿಕೊಳ್ಳಲಾಗುತ್ತದೆ. ಶಿಕ್ಷಕರ ಜೊತೆಗೆ ವಿವಿಧ ಇಲಾಖೆಗಳ ಸಿಬ್ಬಂದಿಗಳ ಜೊತೆಗೆ ಗ್ರಾಮ ಒನ್, ಬೆಂಗಳೂರು ಒನ್, ಸಕಾಲ ಸೇವಾಕೇಂದ್ರದ ಮೂಲಕ ಸಮೀಕ್ಷೆ ನಡೆಸಲಾಗುತ್ತದೆ.ಇದರ ಜೊತೆಗೆ ಮೊಬೈಲ್ ಅಪ್ಲಿಕೇಶನ್ ಮೂಲಕವೂ ಸಮೀಕ್ಷೆ ನಡೆಯಲಿದ್ದು, ರಾಜ್ಯದ ಏಳು ಕೋಟಿ ಜನರನ್ನು ಸಮೀಕ್ಷೆಗೊಳಪಡಿಸುವ ಗುರಿ ಹೊಂದಲಾಗಿದೆ. ‌

ಹೀಗಾಗಿ ಸಮೀಕ್ಷೆ ಆರಂಭಕ್ಕೂ ಮುನ್ನವೇ ಎಚ್ಚೆತ್ತುಕೊಂಡಿರುವ ಸಮುದಾಯಗಳು, ಆಯಾಯ ಜಾತಿ, ಸಮುದಾಯದ ನಾಯಕರಿಂದ ಜಾಗೃತಿ ಸಭೆ, ವೀರಶೈವ ಲಿಂಗಾಯತ, ಒಕ್ಕಲಿಗ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಹಿಂದ ಸಮಾಜದ ನಾಯಕರಿಂದ ಸಭೆಗಳ ಮೇಲೆ ಸಭೆ ಆಯೋಜನೆ ಮಾಡಲಾಗುತ್ತಿದೆ. ಜಿಲ್ಲಾವಾರು ಸಭೆ ನಡೆಸಿ ಸಮೀಕ್ಷೆ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಸಚಿವರು, ಸಮುದಾಯದ ಹೆಸರುಗಳನ್ನು ಸ್ಪಷ್ಟವಾಗಿ ಉಲ್ಲೇಖಿಸುವಂತೆ ಸೂಚಿಸಿದ್ದಾರೆ. ಕಳೆದ ಬಾರಿಯಂತೆ ಗೊಂದಲ ಆಗದಂತೆ ಎಚ್ಚರಿಕೆ ವಹಿಸಲು ಸಲಹೆ ನೀಡಲಾಗಿದ್ದು, ಸಮುದಾಯಗಳಿಗೆ ಅನ್ಯಾಯವಾಗದಂತೆ ಪಕ್ಷಾತೀತವಾಗಿ ಎಲ್ಲಾ ಪಕ್ಷದ ಮುಖಂಡರು ಎಚ್ಚರಿಕೆ ವಹಿಸಿದ್ದಾರೆ.

Tags:
error: Content is protected !!