ಬೆಂಗಳೂರು: ಎಲ್ಲರ ಅಭಿಪ್ರಾಯ ಪಡೆದು ಜಾತಿ ಗಣತಿ ವರದಿ ಬಗ್ಗೆ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ (Home Minister G Parameshwara) ತಿಳಿಸಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಾತಿ ಗಣತಿ ವರದಿ ಬಗ್ಗೆ ಎಲ್ಲರೂ ಅವರ ಅಭಿಪ್ರಾಯ ಹೇಳಿದ್ದಾರೆ. ಎಲ್ಲರ ಅಭಿಪ್ರಾಯದ ಬಳಿಕ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಇದು ಒಬ್ಬರ ನಿರ್ಧಾರ ಅಲ್ಲ. ಸಂಪುಟ ಸಭೆಯಲ್ಲಿ ಒಬ್ಬೊಬ್ಬರು ವಿವಿಧ ಅಭಿಪ್ರಾಯ ನೀಡಿದ್ದಾರೆ. ಈ ಹೇಳಿಕೆಗಳ ಮೇಲೆ ಸುದೀರ್ಘ ಅಧ್ಯಯನ ಮಾಡಿದ ಮೇಲೆ ವೈಜ್ಞಾನಿಕ ಸಮೀಕ್ಷೆ ಅನ್ನಿಸುತ್ತಿದೆ ಎಂದು ಅಭಿಪ್ರಾಯ ಪಟ್ಟರು.
ಇದನ್ನೂ ಓದಿ:- Caste Census | ವಿಶೇಷ ಸಭೆಯಲ್ಲಿ ಸಹೋದ್ಯೋಗಿಗಳಿಗೆ ಸಿ.ಎಂ ಹೇಳಿದ್ದೇನು?
ಇನ್ನು ಮುಂದುವರಿದು ಮಾತನಾಡಿದ ಅವರು, ಜಾತಿಗಣತಿ ವರದಿ ಬಗ್ಗೆ ಯಾರೂ ಆತಂಕ ಪಡುವ ಅಗತ್ಯವಿಲ್ಲ. ಎಲ್ಲರ ಅಭಿಪ್ರಾಯ ಸಂಗ್ರಹಿಸಿಯೇ ಮುಂದಿನ ತೀರ್ಮಾನ ಎಂದರು.
ಇದನ್ನೂ ಓದಿ:- ಜಾತಿಗಣತಿ ವರದಿ ತಿರಸ್ಕರಿಸಿ: ಸಿಎಂ ಸಿದ್ದುಗೆ ಶೋಭಾ ಕರಂದ್ಲಾಜೆ ಪತ್ರ





