ತುಮಕೂರು: ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಬಾಲಕ ಸೇರಿದಂತೆ ಐವರು ಸಾವನ್ನಪ್ಪಿರುವ ಘಟನೆ ಮಧುಗಿರಿ ತಾಲೂಕಿನ ಕಾಟಗೊಂಡನಹಳ್ಳಿ ಬಳಿ ಜರುಗಿದೆ.
ಜನರ್ಧನ್(29), ಸಿಂಧು(30), ವೇದಾಂತ್(8)ಮೃತರು. ಇನ್ನಿಬ್ಬರ ಮೃತರ ಹೆಸರು ತಿಳಿದು ಬಂದಿಲ್ಲ. ಗೀತಾ, ಆನಂದ್, ಯೋದ ಮತ್ತು ಒಂದು ವರ್ಷದ ಗಂಡು ಮಗು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ತುಮಕೂರಿನಿಂದ ಮಧುಗಿರಿ ಕಡೆಗೆ ತೆರಳುತ್ತಿದ್ದ ಕಾರು, ಪಾವಗಡದಿಂದ ಬೆಂಗಳೂರು ಕಡೆಗೆ ಹೊರಟಿದ್ದ ಇನ್ನೊಂದು ಕಾರು ಮುಖಾಮುಖಿಯಾಗಿ ಡಿಕ್ಕಿ ಸಂಭವಿಸಿದೆ.
ಈ ಘಟನೆ ಸಂಬಂಧ ಮಧುಗಿರಿ ಠಾಣೆಯಲ್ಲಿ ದೂರು ದಾಖಲಾಗಿದೆ.