ಬೆಳಗಾವಿ : ಕಾರು ಅಪಘಾತದಲ್ಲಿ ಗಾಯಗೊಂಡ ಸಚಿವ ಲಕ್ಷ್ಮಿ ಹೆಬ್ಬಾಳಕರ ಅವರ ಬೆನ್ನಿನ ಎರಡು ಮೂಳೆಗಳು ಸ್ಪಲ್ವ ಪ್ರಮಾಣದಲ್ಲಿ ಮುರಿದಿದೆ. ಆದರೆ ಗಂಭೀರವಾಗಿಲ್ಲ. ಶಸ್ತ್ರಚಿಕಿತ್ಸೆ ಮಾಡುವ ಅಗತ್ಯವಿಲ್ಲ ಎಂದು ಚಿಕಿತ್ಸೆ ನೀಡಿದ ವಿಜಯಾ ಆಸ್ಪತ್ರೆಯ ಡಾ.ರವಿ ಪಾಟೀಲ ಹೇಳಿದರು.
ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅವರು ಒಂದು ತಿಂಗಳು ಬೆಡ್‌ರೆಸ್ಟ್ ಮಾಡಬೇಕು. ಶಸ್ತ್ರ ಚಿಕಿತ್ಸೆಯ ಅಗತ್ಯವಿಲ್ಲ ಎಂದಿದ್ದಾರೆ.
ಮೂರು ದಿನಗಳು ಆಸ್ಪತ್ರೆಯಲ್ಲೇ ಚಿಕಿತ್ಸೆ ನೀಡಿದ ಬಳಿಕ ಮನೆಗೆ ಕಳುಹಿಸಲಾಗುವುದು. ಸದ್ಯ ನೋವು ನಿವಾರಕ ಕೊಡಲಾಗಿದೆ. ಕಡ್ಡಾಯವಾಗಿ ಅವರು ಒಂದು ತಿಂಗಳು ಬೆಡ್‌ರೆಸ್ಟ್ ಮಾಡಬೇಕು ಎಂದು ಹೇಳಿದರು.