Mysore
25
few clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಅಕ್ಟೋಬರ್.‌18ರಂದು ಸಚಿವ ಸಂಪುಟ ಸಭೆ: ಸಿಎಂ ಸಿದ್ದರಾಮಯ್ಯ ಮಾಹಿತಿ

ಬೆಂಗಳೂರು: ಅಕ್ಟೋಬರ್.‌18ರಂದು ಸಚಿವ ಸಂಪುಟ ಸಭೆ ಕರೆಯಲಾಗಿದ್ದು, ಅಲ್ಲಿ ಜಾತಿ ಗಣತಿ ವರದಿ ಮಂಡನೆಯಾಗಲಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಪಕ್ಷಾತೀತವಾಗಿ ಎಲ್ಲಾ ನಾಯಕರು ಜಾತಿ ಗಣತಿ ವರದಿ ಜಾರಿಗೆ ಒತ್ತಾಯಿಸಿದ್ದಾರೆ.

ಇದೇ ತಿಂಗಳ 18ರಂದು ನಡೆಯುವ ಸಂಪುಟ ಸಭೆ ಮುಂದೆ ಈ ವರದಿಯ ಬಗ್ಗೆ ಚರ್ಚೆ ನಡೆಸಲಾಗುವುದು.

ಇದು ಹಿಂದುಳಿದ ವರ್ಗಗಳ ಸಮೀಕ್ಷೆ ಮಾತ್ರವಲ್ಲ. ಏಳು ಕೋಟಿ ಜನರ ಸಮೀಕ್ಷೆ. ದೇಶದಲ್ಲಿ ಮೊದಲ ಬಾರಿಗೆ ಇಂತಹ ಸಮೀಕ್ಷೆ ನಡೆದಿದೆ. ನಾನು ಈ ವರದಿಯನ್ನು ನೋಡಿಲ್ಲ ಹಾಗೂ ಓದೂ ಕೂಡ ಇಲ್ಲ ಎಂದರು.

ಅಂದು ನಡೆಯುವ ಸಭೆಯಲ್ಲಿ ಜಾತಿ ಗಣತಿ ವರದಿ ಬಗ್ಗೆ ಸಂಪೂರ್ಣ ಚರ್ಚೆ ನಡೆಯಲಿದೆ. ಎಲ್ಲಾ ಸಚಿವರ ಅಭಿಪ್ರಾಯಗಳನ್ನು ಸಹ ಕೇಳಲಾಗುತ್ತದೆ. ಸಭೆ ಬಳಿಕ ಮುಂದಿನ ತೀರ್ಮಾನ ಏನು ಎಂಬುದನ್ನು ನಿರ್ಧಾರ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.

Tags: