Mysore
13
clear sky

Social Media

ಸೋಮವಾರ, 15 ಡಿಸೆಂಬರ್ 2025
Light
Dark

ಡಿಕೆಶಿ ಮೊದಲು ಕಾಂಗ್ರೆಸ್‌ ಪಕ್ಷದ ನಟ್ಟು, ಬೋಲ್ಟ್ ಸರಿ ಮಾಡಿಕೊಳ್ಳಲಿ: ಸಿ.ಟಿ.ರವಿ

ಬೆಂಗಳೂರು: ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಸಿನಿಮಾ ಕಲಾವಿದರ ನಟ್ಟು, ಬೋಲ್ಟು ಸರಿಪಡಿಸುವ ಮೊದಲು ಕಾಂಗ್ರೆಸ್‌ ಪಕ್ಷದ ನಟ್ಟು ಬೋಲ್ಟ್ ಸರಿ ಮಾಡಿಕೊಳ್ಳಲಿ ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಟಿ.ರವಿ ತಿರುಗೇಟು ನೀಡಿದ್ದಾರೆ.

ಬೆಂಗಳೂರಿನಲ್ಲಿ ಇಂದು(ಮಾರ್ಚ್.‌3) ಈ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಸಿನಿಮಾ ಕಲಾವಿದರು ನಟ್ಟು, ಬೋಲ್ಟ್‌ ಟೈಟ್‌ ಮಾಡಲು ಅವರೇನೂ ಜೀತಾದಾಳುಗಳಲ್ಲ. ಅವರು ಕಲಾವಿದರಿಗೆ ಅಪಮಾನ ಮಾಡುವಂತಹ ಕೆಲಸ ಮಾಡಿದ್ದಾರೆ. ಹೀಗಾಗಿ ಡಿ.ಕೆ.ಶಿವಕುಮಾರ್‌ ಅವರು ಸಿನಿಮಾ ಕಲಾವಿದರ ಬಳಿ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.

ರಾಜ್ಯದಲ್ಲಿ ಒಂದು ಪಕ್ಷ ಕರೆ ನೀಡಿದಾಗ ಅದಕ್ಕೆ ಕಲಾವಿದರು ಬರಬೇಕೆಂಬ ನಿಯಮವಿಲ್ಲ. ಈ ರೀತಿ ಹುಚ್ಚು ಹುಚ್ಚಾಗಿ ಮಾತನಾಡುವುದನ್ನು ಬಿಟ್ಟು, ತಮ್ಮ ಪಕ್ಷದ ನಟ್ಟು, ಬೋಲ್ಟ್‌ ಸರಿಮಾಡಿಕೊಳ್ಳಲಿ ಎಂದು ಹರಿಹಾಯ್ದರು.

ಏನಿದು ವಾಕ್ಸಮರ?

16ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನಾ ಸಮಾರಂಭಕ್ಕೆ ನಟ ಮತ್ತು ನಟಿಯು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸದಿದ್ದಕ್ಕೆ ಬೇಸರಗೊಂಡಿದ್ದ ಡಿಸಿಎಂ ಡಿ.ಕೆ.ಶಿವಕುಮಾರ್‌ ಯಾವ ನಟನಿಗೆ, ಯಾವ ನಟಿಗೆ ಎಲ್ಲೆಲ್ಲಿ ನಟ್ಟು, ಬೋಲ್ಟ್‌ ಟೈಟ್‌ ಮಾಡಬೇಕು ಎಂದು ನನಗೆ ಗೊತ್ತಿದೆ ಎಂದು ಹೇಳಿದ್ದರು.

Tags:
error: Content is protected !!