Mysore
26
overcast clouds

Social Media

ಶುಕ್ರವಾರ, 12 ಡಿಸೆಂಬರ್ 2025
Light
Dark

ಮುಡಾ ಪ್ರಕರಣದಲ್ಲ ಸಿಎಂ ಸಿದ್ದರಾಮಯ್ಯಗೆ ಕ್ಲೀನ್‌ ಚೀಟ್‌| ಇದ್ದವರರು ಮೂವರಲ್ಲಿ ಕದ್ದವರರು ಯಾರು: ಸಿ.ಟಿ.ರವಿ

ಬೆಂಗಳೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ಲೋಕಾಯುಕ್ತ ಅಧಿಕಾರಿಗಳು ಸಿಎಂ ಸಿದ್ದರಾಮಯ್ಯ ಅವರಿಗೆ ಕ್ಲೀನ್‌ಚಿಟ್‌ ನೀಡಿದ್ದು, ಇದ್ದವರು ಮೂವರಲ್ಲಿ ಕದ್ದವರು ಯಾರು ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಟಿ.ರವಿ ಪ್ರಶ್ನಿಸಿದ್ದಾರೆ.

ವಿಧಾನಸೌಧದಲ್ಲಿ ಇಂದು(ಫೆಬ್ರವರಿ.21) ಈ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯ ಸರ್ಕಾರವೇ ಮುಡಾದಲ್ಲಿ ಸಾವಿರಾರು ಕೋಟಿ ರೂ.ಗಳಷ್ಟು ಭ್ರಷ್ಟಾಚಾರ ನಡೆದಿದೆ ಎಂದು ಒಪ್ಪಿಕೊಂಡಿದೆ. ಸಿಎಂ ಸಿದ್ದರಾಮಯ್ಯ ಕುಟುಂಬದವರು 14 ನಿವೇಶನಗಳನ್ನು ವಾಪಾಸ್‌ ನೀಡಿದ್ದಾರೆ. ಅಲ್ಲದೇ ಜಿಲ್ಲಾಧಿಕಾರಿಗಳು ವರದಿ ನೀಡಿದ್ದಾರೆ. ಹೀಗಾಗಿ ಮುಡಾ ಪ್ರಕರಣದ ವಿಚಾರದಲ್ಲಿ ಇದ್ದವರು ಮೂವರಲ್ಲಿ ಕದ್ದವು ಯಾರು ಎಂಬುದೇ ತಿಳಿಯುತ್ತಿಲ್ಲ ಎಂದು ಹೇಳಿದ್ದಾರೆ.

ಈ ಪ್ರಕರಣದಲ್ಲಿ ಮೈಸೂರು ಲೋಕಾಯುಕ್ತ ತನಿಖೆ ಎಸಿಬಿ ದಾರಿಯಲ್ಲೇ ಇಳಿದಿದೆ. ಆದರೆ ಸಿದ್ದರಾಮಯ್ಯ ಅವಇಗೆ ಕ್ಲೀನ್‌ಚಿಟ್‌ ನೀಡಿರುವುದು ದುರದಷ್ಟಕರವಾಗಿದೆ. ಲೋಕಾಯುಕ್ತದಂದ ಸಮಗ್ರ ತನಿಖೆಯಾಗಿಲ್ಲ. ಇ.ಡಿ.ತನಿಖಾ ಸಂಸ್ಥೆ ಹಣ ವರ್ಗಾವಣೆ ಆಗಿರುವುದನ್ನು ಪತ್ತೆ ಹಚ್ಚಿದೆ. ಆದರೆ ಲೋಕಾಯುಕ್ತ ಸಂಸ್ಥೆ ಅಪರಾಧ ನಡೆಸಿದ ಅಪರಾಧಿ ಯಾರು ಎಂಬುದನ್ನು ಹೇಳಿಲ್ಲ. ಹಾಗಾದರೆ ಮುಡಾದಲ್ಲಿ ಏನು ನಡೆದೇ ಇಲ್ವಾ? ಸತ್ಯವನ್ನು ಸಮಾಧಿ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಇನ್ನು ಈ ಬಗ್ಗೆ ನಮ್ಮ ಪಕ್ಷದ ವರಿಷ್ಠರ ಜೊತೆ ಸಮಾಲೋಚನೆ ನಡೆಸಿ ಮುಂದೆ ಯಾವ ರೀತಿ ಹೋರಾಟ ಮಾಡಬೇಕು ಎಂದು ಚರ್ಚೆ ಮಾಡುತ್ತೇವೆ. ಸಿಎಂ ಸಿದ್ದರಾಮಯ್ಯ ಅವರ ಕಾನೂನು ಸಲಹೆಗಾರ ಪೊನ್ನಣ್ಣ ಅವರು ಶಾಸಕರಾಗಿ ಮಾತನಾಡುತ್ತಿದ್ದಾರೇನೋ ಗೊತ್ತಿಲ್ಲ. ಅವರಿಗೆ ವಕೀಲರರಾಗಿ ಕೆಲಸ ನಿರ್ವಹಿಸುವುದಕ್ಕೆ ಫೀ ಸಿಗುತ್ತದೆ. ಆದರೆ ಅವರು ಶಾಸಕರಾಗಿ ಮಾತನಾಡೋದಕ್ಕೂ ಫೀ ಸಿಗುತ್ತೋ ಗೊತ್ತಿಲ್ಲ ಎಂದು ವ್ಯಂಗ್ಯ ಮಾಡಿದ್ದಾರೆ.

Tags:
error: Content is protected !!