Mysore
22
haze

Social Media

ಬುಧವಾರ, 07 ಜನವರಿ 2026
Light
Dark

ಸಿಎಂ ಪತ್ನಿಗೆ ಅರ್ಹತೆಗೂ ಮೀರಿ ೧೪ ಜಮೀನುಗಳು ಹಂಚಿಕೆ ಮಾಡಿದ್ದಾರೆ ; ಬಿವೈ ವಿಜಯೇಂದ್ರ

ಬೆಂಗಳೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಹಗರಣ  ದಿನೇ ದಿನೇ ಸಿಎಂ ಸಿದ್ದರಾಮಯ್ಯ ಅವರಿಗೆ ಉರುಳಾಗಿ ಸುತ್ತಿಕೊಳ್ಳುತ್ತಿದೆ. ಅಷ್ಟೇ ಅಲ್ಲದೆ ದಿನಕ್ಕೊಂದು ಟ್ವಿಸ್ಟ್‌ ಮೇಲೆ ಟ್ವಿಸ್ಟ್‌ ಸಹ ಪಡೆದುಕೊಳ್ಳುತ್ತಿದೆ. ಈ ಬೆನ್ನಲ್ಲೆ ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರಿಗೆ ಅಕ್ರಮವಾಗಿ ೧೪ ಸೈಟ್‌ ಗಳನ್ನ ನೀಡಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಆರೋಪ ಮಾಡಿದ್ದಾರೆ.

ಮುಡಾ ಹಗರಣ ಸಂಬಂಧವಾಗಿ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಿ.ವೈ ವಿಜಯೇಂದ್ರ, ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿಗೆ ಅವರಿಗೆ ಅರ್ಹತೆಗೂ ಮೀರಿ ಎರಡು ಕೋಟಿ ರೂ ಬೆಲೆಬಾಳುವ ೧೪ ಜಮೀನುಗಳನ್ನ ಹಂಚಿಕೆ ಮಾಡಲಾಗಿದೆ. ಅರ್ಹತೆ ಪ್ರಕಾರ ಪಾರ್ವತಿ ಅವರಿಗೆ ನೀಡಬೇಕಾಗಿರೋದು ಕೇವಲ ಎರಡು ಜಮೀನು ಮಾತ್ರ. ಇಲ್ಲಿ ನೋಡಿದ್ರೆ ೧೪ ಜಮೀನು ನೀಡಿದ್ದಾರೆ ಎಂದು ವಿಜಯೇಂದ್ರ  ಆರೋಪಿಸಿದ್ದಾರೆ.

ಅಲ್ಲದೆ ಸಿಎಂ ಪತ್ನಿಗೆ ಮೈಸೂರಿನ ಕೆಸರೇ ಗ್ರಾಮದಲ್ಲಿ ೩.೧೬ ಜಮೀನನ್ನು ಹೊಂದಿದ್ದರು. ಈ ಜಮೀನನ್ನು ೨೦೧೪ ರಲ್ಲಿ ಮುಡಾ ಬಳಸಿಕೊಂಡಿದೆ ಎಂದು ಪಾರ್ವತಿ ಮುಡಾಗೆ ದೂರು ನೀಡಿದ್ದರು. ಈ ಬಗ್ಗೆ ೨೦೧೭ ರಲ್ಲಿ ತನಿಖೆ ಮಾಡಿ ಪರಿಹಾರದ ಭೂಮಿಯನ್ನ ನೀಡಲು ನಿರ್ಧರಿಸಲಾಯಿತು. ೨೦೨೧ ರಲ್ಲಿ ಪ್ರತಿ ಚದರ ಅಡಿಗೆ ೯ ಸಾವಿರ ರೂಪಾಯಿ ಬೆಲೆ ಬಾಳುವ ೧೪ ನಿವೇಶಮ ಅರ್ಹತೆಗೂ ಮೀರಿ ನೀಡಲಾಗಿದೆ. ಇದೇ ವರ್ಷ ಏಪ್ರಿಲ್‌ ೧೫ ರಂದು ಓರ್ವ ವ್ಯಕ್ತಿಗೆನೇ ೪೨ ನಿವೇಶ ನೀಡಿದ್ದಾರೆ. ಈ ಸರ್ಕಾರ ಬಂದ ಮೇಲೆ ಸಾವಿರಾರು ನಿವೇಶನಗಳನ್ನ ಅಕ್ರಮವಾಗಿ ನೀಡಿದ್ದಾರೆ. ತಮ್ಮ ಅವಧಿಯಲ್ಲಿ ಅವ್ಯವಹಾರ ನಡೆಸಿ ಈಗ ಸಿದ್ದರಾಮಯ್ಯ ಅವರು ಪರಿಹಾರ ಕೇಳುತ್ತಿದ್ದಾರೆ. ಪ್ರಕರದ ಬಗ್ಗೆ ಸಿಎಂ ತಪ್ಪು ಮಾಹಿತಿ ನೀಡಲು ಯತ್ನಿಸುತ್ತಿದ್ದಾರೆ. ಇದರಿಂದ ಅವರ ಮುಖವಾಡ ಕಳಚಿ ಬಿದ್ದಿದೆ ಪ್ರತಿಹಂತದಲ್ಲೂ ಹಗರಣದ ವಾಸನೆ ಹೊರಬರುತ್ತಿದೆ ಎಂದರು

ಅಲ್ಲದೆ ಯಾರ ಅವಧಿಯಲ್ಲಿ ಅಕ್ರಮವಾಗಿದ್ದರೂ ಕೂಡ ಅಕ್ರಮ ಅಕ್ರಮನೇ. ಇದರ ಬಗ್ಗೆ ಸಂಪೂರ್ಣವಾಗಿ ತನಿಖೆ ಆಗಬೇಕು ಎಂದು ಆಗ್ರಹಿಸಿದರು.

Tags:
error: Content is protected !!