Mysore
25
clear sky

Social Media

ಭಾನುವಾರ, 14 ಡಿಸೆಂಬರ್ 2025
Light
Dark

ಉಪ ಚುನಾವಣೆ: ಶಿಗ್ಗಾವಿಯಲ್ಲಿ ಮುಗ್ಗರಿಸಿದ ಭರತ್‌, ಗೆದ್ದ ಪಠಾಣ್‌

ಶಿಗ್ಗಾವಿ: ಮಾಜಿ ಸಿಎಂ, ಸಂಸದ ಬಸವರಾಜು ಬೊಮ್ಮಾಯಿಗೆ ಪ್ರತಿಷ್ಠೆಯ ಕಣವಾಗಿದ್ದ ಶಿಗ್ಗಾಂವಿಯಲ್ಲಿ ಬಿಜೆಪಿಯ ಭರತ್‌ ಬೊಮ್ಮಾಯಿಗೆ ಸೋಲಾಗಿದೆ. ಬಂಡಾಯದ ನಡುವೆ ಸ್ಪರ್ಧಿಸಿದ್ದ ಕಾಂಗ್ರೆಸ್‌ ಅಭ್ಯರ್ಥಿ ಯಾಸಿರ್‌ ಅಹಮದ್‌ ಖಾನ್‌ ಪಠಾಣ್‌ ಗೆಲುವು ದಾಖಲಿಸಿದ್ದಾರೆ.

ಭರತ್‌ ಬೊಮ್ಮಾಯಿ ಸೋಲುವ ಮೂಲಕ ಬೊಮ್ಮಾಯಿ ಕುಟುಂಬದ ಮೂರನೇ ತಲೆಮಾರು ವಿಧಾನಸಭೆ ಪ್ರವೇಶಿಸುವುದು ತಪ್ಪಿದೆ. ಅಜ್ಜಂಪೀರ್‌ ಖಾದ್ರಿ ಅವರ ಬಂಡಾಯ ಕಾಂಗ್ರೆಸ್‌ಗೆ ಆರಂಭದ ಹಿನ್ನಡೆಯಾಗಿತ್ತು. ಆದರೆ ಈ ಬಂಡಾಯವನ್ನು ಶಮನಗೊಳಿಸುವಲ್ಲಿ ಯಶಸ್ವಿಯಾದ ಕಾಂಗ್ರೆಸ್‌ ಚುನಾವಣ ಗೆಲುವು ಸಾಧಿಸಿದೆ.

ಶಿಗ್ಗಾಂವಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಯಾಸೀರ್‌ ಖಾನ್‌ ಪಠಾಣ್‌ಗೆ 13,448ಮತಗಳ ಅಂತರದಲ್ಲಿ ಗೆಲುವು ದೊರೆತಿದೆ. ಅವರಿಗೆ 1,00,587 ಮತಗಳು ದೊರೆತಿದ್ದು, ಬಿಜೆಪಿ ಅಭ್ಯರ್ಥಿ ಭರತ್‌ ಬೊಮ್ಮಾಯಿಗೆ 89,960 ಮತಗಳು ದೊರೆತಿವೆ.

 

 

Tags:
error: Content is protected !!