Mysore
15
scattered clouds

Social Media

ಶನಿವಾರ, 24 ಜನವರಿ 2026
Light
Dark

ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣ: ವಿಧಾನಸಭೆಯಲ್ಲಿ ಗದ್ದಲ-ಕೋಲಾಹಲ

Legislative Assembly proceedings

ಬೆಂಗಳೂರು: ಧರ್ಮಸ್ಥಳದಲ್ಲಿನ ಸಮಾಧಿಗಳ ಉತ್ಖನನ ಪ್ರಕರಣ ವಿಧಾನಸಭೆಯಲ್ಲಿ ಪ್ರಸ್ತಾಪವಾಗಿ ಕೋಲಾಹಲದ ವಾತಾವರಣ ನಿರ್ಮಾಣವಾಯಿತು.

ಪ್ರಶ್ನೋತ್ತರದ ಬಳಿಕ ಬಿಜೆಪಿಯ ಕಾರ್ಕಳದ ಶಾಸಕ ವಿ.ಸುನೀಲ್‌ಕುಮಾರ್‌ ಅವರು ಮಾತನಾಡಿ, ಎಸ್‌‍ಐಟಿ ತನಿಖೆಯನ್ನು ನಾವು ಸ್ವಾಗತಿಸುತ್ತೇವೆ, ಆದರೆ ತನಿಖೆಯ ಹೆಸರಿನಲ್ಲಿ ಹಿಂದೂ ಧಾರ್ಮಿಕ ಕೇಂದ್ರಗಳ ಅವಹೇಳನ ನಡೆಯುತ್ತಿದೆ.

ಧರ್ಮಸ್ಥಳವನ್ನು ಗುರಿಯಾಗಿಸಿಕೊಳ್ಳಲಾಗಿದೆ, ನಮ ನಂಬಿಕೆ ಶ್ರದ್ದೆಗಳ ಮೇಲೆ ದಾಳಿಯಾಗುತ್ತಿದೆ. ಈವರೆಗೂ 16 ಗುಂಡಿಗಳನ್ನು ಅಗೆಯಲಾಗಿದೆ. ಅಲ್ಲಿ ಏನು ಸಿಕ್ಕಿದೆ ಎಂಬುದು ಗೊತ್ತಾಗಿಲ್ಲ, ಸಚಿವರು ಉತ್ತರ ನೀಡಿ ಊಹಾಪೋಹಗಳಿಗೆ ತೆರೆ ಎಳೆಯಬೇಕು. ಇನ್ನು ಎಷ್ಟು ಗುಂಡಿಗಳನ್ನು ಅಗೆಯುತ್ತಿರಾ? ಎಲ್ಲಿಯವರೆಗೂ ತನಿಖೆ ನಡೆಯುತ್ತದೆ ಎಂದು ಪ್ರಶ್ನಿಸಿದ್ದರು.

ಇದಕ್ಕೆ ಉತ್ತರ ನೀಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಸರ್ಕಾರ ತನಗೆ ಬಂದ ದೂರುಗಳು ಹಾಗೂ ಧರ್ಮಸ್ಥಳ ಭಾಗದ ಜನಸಮಾ ಸಮುದಾಯದ ಒತ್ತಾಯದ ಮೇರೆಗೆ ಜು.19 ರಂದು ಎಸ್‌‍ಐಟಿ ತನಿಖೆಗೆ ಆದೇಶ ನೀಡಿದೆ. ತನಿಖೆ ಪ್ರಗತಿಯಲ್ಲಿದ್ದು ಪೂರ್ಣಗೊಂಡ ಬಳಿಕ ವರದಿ ನೀಡಲಾಗುವುದು ತನಿಖೆಗೆ ಕಾಲಮಿತಿಯನ್ನು ನಿಗದಿ ಮಾಡಲಾಗಿದೆ ನೂರಾರು ಗುಂಡಿಗಳನ್ನು ಅಗೆಯಲು ಸಾಧ್ಯವಿಲ್ಲ ಎಂದು ವರದಿ ಸಲ್ಲಿಕೆಯಾದ ಬಳಿಕ ಉತ್ತರ ನೀಡಲಾಗುವುದು ಎಂದರು.

ಈ ಹಂತದಲ್ಲಿ ಬಿಜೆಪಿಯ ಸದಸ್ಯರು ಆ ಅನಾಮಿಕ ಯಾರು ಆತ ತಲೆ ಬುರುಡೆಯನ್ನು ಎಲ್ಲಿಂದ ತಂದಿದ್ದ ಎಂದು ಪ್ರಶ್ನಿಸಿ ಗದ್ದಲ ಎಬ್ಬಿಸಿದರು. ಸಭಾಧ್ಯಕ್ಷ ಯು.ಟಿ.ಖಾದರ್‌ ಇಷ್ಟು ದಿನ ಈ ಬಗ್ಗೆ ಸುಮ್ಮನಿದ್ದು ಅಧಿವೇಶನದಲ್ಲಿ ಶೂನ್ಯ ವೇಳೆಗೆ ಚರ್ಚೆ ಮಾಡುತ್ತಿರುವುದು ಏಕೆ? ನಿಮ್ಮ ಅಭಿಪ್ರಾಯಗಳಿದ್ದರೆ ಲಿಖಿತ ರೂಪದಲ್ಲಿ ನೀಡಿ ಎಂದು ಸೂಚಿಸಿದರು.

ಆ.12ರವರೆಗಿನ ತನಿಖೆಯ ಫಲಿತಾಂಶವೇನು ಎಂದು ಸದನದ ಮುಂದಿಡಿ. ಅಗತ್ಯ ಬಿದ್ದರೆ ಎಸ್‌‍ಐಟಿಯಿಂದ ಮಧ್ಯಂತರ ವರದಿ ಪಡೆದುಕೊಳ್ಳಿ ಎಂದು ಮತ್ತೆ ಶಾಸಕ ಸುನೀಲ್‌ ಕುಮಾರ್‌ ಆಗ್ರಹಿಸಿದರು. ಎಸ್‌‍ಐಟಿ ತನಿಖಾ ವರದಿ ಸಲ್ಲಿಸುವ ಮೊದಲು ಚರ್ಚೆ ನಡೆಸುವುದು ಅನಗತ್ಯ. ನಾನು ಉತ್ತರವನ್ನು ನೀಡುವುದಿಲ್ಲ ಎಂದು ಪರಮೇಶ್ವರ್‌ ಸ್ಪಷ್ಟಪಡಿಸಿದರ. ಅಲ್ಲಿಗೆ ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣದ ಚರ್ಚೆಗೆ ತೆರೆಬಿದ್ದಿತು.

Tags:
error: Content is protected !!